ADVERTISEMENT

ಟೊರೆಂಟೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪಿಂಕ್‌ ಧಿರಿಸಿನಲ್ಲಿ ಕಂಗೊಳಿಸಿದ ಪ್ರಿಯಾಂಕ

ಪಿಟಿಐ
Published 8 ಸೆಪ್ಟೆಂಬರ್ 2017, 12:12 IST
Last Updated 8 ಸೆಪ್ಟೆಂಬರ್ 2017, 12:12 IST
ಟೊರೆಂಟೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪಿಂಕ್‌ ಧಿರಿಸಿನಲ್ಲಿ ಕಂಗೊಳಿಸಿದ ಪ್ರಿಯಾಂಕ
ಟೊರೆಂಟೊ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪಿಂಕ್‌ ಧಿರಿಸಿನಲ್ಲಿ ಕಂಗೊಳಿಸಿದ ಪ್ರಿಯಾಂಕ   

ಟೊರೆಂಟೊ: ಟೊರೆಂಟೊದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ‘ಫಿಲ್ಮ್‌ ಫೆಸ್ಟಿವಲ್‌’ನಲ್ಲಿ(ಟಿಐಎಫ್ಎಫ್) ಪ್ರಿಯಾಂಕ ಚೋಪ್ರಾ ಮಿಂಚಿದ್ದಾರೆ.

‘ಫಿಲ್ಮ್‌ ಫೆಸ್ಟಿವಲ್‌’ನಲ್ಲಿ ‘ಪಿಂಕ್‌’ ಧಿರಿಸಿನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕ ‘ರೆಡ್‌ ಕಾರ್ಪೆಟ್‌’ ಮೇಲೆ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಿಯಾಂಕಾ ಅವರು ‘ಪಹುನ’ ಪ್ರದರ್ಶನದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಬಿಳಿ, ತಿಳಿ ಗುಲಾಬಿ ಬಣ್ಣದ ಪಟ್ಟಾ–ಪಟ್ಟಿಯ ಬ್ಲೇಜರ್ ಧರಿಸಿನಲ್ಲಿ ಕಂಗೊಳಿಸಿದ ಪ್ರಿಯಾಂಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ADVERTISEMENT

ಇದೇ ವೇಳೆ ಪ್ರಿಯಾಂಕಾ ಚೋಪ್ರಾ ಅವರ ತಮ್ಮ ತಾಯಿ ಮತ್ತು ನಟಿ ಮಧು ಅವರ ಸಿಕ್ಕಿಮೀಸ್ ನಿರ್ಮಾಣದ ಚಿತ್ರ ‘ಪಹುನ: ಲಿಟಲ್ ವಿಸಿಟರ್ಸ್’ ಪ್ರಥಮ ಪ್ರದರ್ಶನ ಕಂಡಿದ್ದು, ಚಪ್ಪಾಳೆಯನ್ನೂ ಗಿಟ್ಟಿಸಿದೆ.

’ಪಹುನಾ’ (ಲಿಟಲ್ ವಿಸಿಟರ್ಸ್) ತಮ್ಮ ಪೋಷಕರಿಂದ ಬೇರ್ಪಟ್ಟ ಮೂರು ನೇಪಾಳಿ ಮಕ್ಕಳ ಕತೆಯನ್ನು ಹೆಣೆದುಕೊಂಡಿದ್ದು, ನೇಪಾಳದ ಮಾವೊವಾದಿಗಳ ಆಂದೋಲನದಿಂದ ತಪ್ಪಿಸಿಕೊಂಡು ಸಿಕ್ಕಿಂಗೆ ಪಲಾಯನ ಮಾಡುವ ಅಂಶಗಳನ್ನು ಒಳಗೊಂಡಿದೆ.

ಈ ಚಿತ್ರವನ್ನು ಪಾಖಿ ಟೈರ್ವಾಲಾ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.