ADVERTISEMENT

‘ಠಾಕ್ರೆ’ಯಾದರು ನವಾಜುದ್ದೀನ್ ಸಿದ್ದಿಕಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST
ಠಾಕ್ರೆ ಗೆಟಪ್ಪಿನಲ್ಲಿ ನವಾಜುದ್ದೀನ್‌ ಸಿದ್ಧಿಕಿ
ಠಾಕ್ರೆ ಗೆಟಪ್ಪಿನಲ್ಲಿ ನವಾಜುದ್ದೀನ್‌ ಸಿದ್ಧಿಕಿ   

ಠಾಕ್ರೆ ಜೀವನಚರಿತ್ರೆಯನ್ನು ಆಧರಿಸಿದ ಸಿನಿಮಾ ‘ಠಾಕ್ರೆ’ಯ ಮೊದಲ ನೋಟವನ್ನು (ಫಸ್ಟ್‌ ಲುಕ್‌ ‍ಪೋಸ್ಟರ್‌) ನವಾಜುದ್ದೀನ್ ಸಿದ್ದಿಕಿ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಈಚೆಗೆ ಶೇರ್ ಮಾಡಿಕೊಂಡಿದ್ದರು.

‘ಠಾಕ್ರೆಯಂಥವರ ಜೀವನಚರಿತ್ರೆಗೆ ಮುಸ್ಲಿಂ ನಟನೇ ಆಗಬೇಕಷ್ಟೇ. ಇದು ಇಂಡಿಯಾದಲ್ಲಷ್ಟೇ ಸಾಧ್ಯ’ ಎಂಬ ಟೀಕೆಗಳೂ ವ್ಯಕ್ತವಾಗಿತ್ತು. ‘ಯಾರೂ ಆಕ್ಷೇಪ ವ್ಯಕ್ತಪಡಿಸದೇ ಇರಲಪ್ಪಾ’ ಎಂಬ ಕಾಳಜಿಯೂ ವ್ಯಕ್ತವಾಗಿತ್ತು.

ಠಾಕ್ರೆ ಕುರಿತ ಈ ಸಿನಿಮಾಕ್ಕೆ ಸಿದ್ದಿಕಿ ಒಪ್ಪುವುದಿಲ್ಲ ಎಂಬ ಮಾತು ಬಹುದಿನಗಳಿಂದ ಕೇಳಿಬರುತ್ತಿತ್ತು. ಅಕ್ಷಯ್‌ ಕುಮಾರ್‌ ಹೆಸರು ಚಲಾವಣೆಯಲ್ಲಿತ್ತು. ಆದರೆ ಇದೀಗ ‘ಠಾಕ್ರೆ’ಯಾಗಿ ಸಿದ್ಧಿಕಿ ನೀಡಿರುವ ಪೋಸು ನೋಡಿದರೆ ಪಾತ್ರಕ್ಕಾಗಿ ಸಾಕಷ್ಟು ಮೇಕ್‌ಓವರ್‌ ಮಾಡಿಕೊಂಡು ಮೊದಲ ನೋಟದಲ್ಲೇ ದಂಗುಬಡಿಸಿದ್ದಾರೆ.

ADVERTISEMENT

‘ಈ ದೇಶದ ನಿಜವಾದ ರಾಜನನ್ನು ತೆರೆಯಲ್ಲಿ ಪ್ರತಿನಿಧಿಸಲು ಹೆಮ್ಮೆ ಅನಿಸುತ್ತದೆ. ಉದ್ಧವ್‌ ಠಾಕ್ರೆ, ಸಂಜಯ್‌ ರಾವುತ್‌, ಅಮಿತಾಭ್‌ ಬಚ್ಚನ್ ಮತ್ತು ಅಭಿಜಿತ್‌ ಪಾನ್ಸೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಿದ್ಧಿಕಿ ಹೇಳಿದ್ದಾರೆ.

2019ರ ಜನವರಿ 23ಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲು ಚಿತ್ರ ಬಿಡುಗಡೆಯಾಗಬೇಕು ಎಂಬುದು ಹಲವರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.