ADVERTISEMENT

ತಾಯ್ತನದಿಂದ ಪಾತ್ರಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2015, 19:30 IST
Last Updated 30 ಸೆಪ್ಟೆಂಬರ್ 2015, 19:30 IST

‘‘ನಿಜಜೀವನದಲ್ಲಿ ತಾಯಿಯಾಗಿದ್ದು ‘ಜಸ್ಬಾ’ ಚಿತ್ರದಲ್ಲಿ ಪಾತ್ರವನ್ನು ಹೆಚ್ಚು ನೈಜವಾಗಿ ನಿರ್ವಹಿಸಲು ಸಹಾಯವಾಯಿತು’’ ಎಂದು ಬಾಲಿವುಡ್‌ ಬೆಡಗಿ ಐಶ್ಚರ್ಯಾ ರೈ ಬಚ್ಚನ್‌ ಹೇಳಿದ್ದಾರೆ.

‘ಜಸ್ಬಾ’ ಚಿತ್ರದ ಮೂಲಕ ಐದು ವರ್ಷಗಳ ನಂತರ ಐಶ್ವರ್ಯಾ ರೈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನಾನು ನಿಜಜೀವನದಲ್ಲಿ ತಾಯಿಯಾಗಿದ್ದು, ಈ ಚಿತ್ರದ ಪಾತ್ರಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳಲು ನೆರವಾಯಿತು. ಯಾವುದೇ ಭಾವನಾತ್ಮಕ ಸನ್ನಿವೇಶಕ್ಕೆ ನೀವು ನಿಮ್ಮ ನೈಜ ಅನುಭವದಿಂದ ವಾಸ್ತವಿಕ ಸ್ಪರ್ಶ ನೀಡಬಹುದಾಗಿದೆ.

ಸಿನಿಮಾದಲ್ಲಿನ ದೃಶ್ಯಗಳಲ್ಲಿ ಪೂರ್ತಿ ತನ್ಮಯತೆ ಸಾಧಿಸಲು ಸಾಧ್ಯವಾಗುತ್ತದೆ. ನಿಜ ಜೀವನದಲ್ಲಿ ತಾಯಿಯಾದ ಅನುಭವ ಈ ಸಿನಿಮಾದಲ್ಲಿನ ನನ್ನ ಪಾತ್ರದ ಪ್ರಾಮಾಣಿಕತೆಯನ್ನು ಹೆಚ್ಚಿಸಿದೆ’ ಎಂದು ಐಶ್ವರ್ಯಾ ‘ಜಸ್ಬಾ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.