ADVERTISEMENT

ನನ್ನನ್ನು ತುಳಿಯೋಕೆ ಆಗಲ್ಲ, ನಾನು ಸೂಪರ್ ಸ್ಟಾರ್ ಆಗಾಯ್ತು; ಸಿಡಿಮಿಡಿಗೊಂಡ ಹುಚ್ಚ ವೆಂಕಟ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 13:46 IST
Last Updated 28 ಏಪ್ರಿಲ್ 2017, 13:46 IST
ನನ್ನನ್ನು ತುಳಿಯೋಕೆ ಆಗಲ್ಲ, ನಾನು ಸೂಪರ್ ಸ್ಟಾರ್ ಆಗಾಯ್ತು; ಸಿಡಿಮಿಡಿಗೊಂಡ ಹುಚ್ಚ ವೆಂಕಟ್
ನನ್ನನ್ನು ತುಳಿಯೋಕೆ ಆಗಲ್ಲ, ನಾನು ಸೂಪರ್ ಸ್ಟಾರ್ ಆಗಾಯ್ತು; ಸಿಡಿಮಿಡಿಗೊಂಡ ಹುಚ್ಚ ವೆಂಕಟ್   

ಬೆಂಗಳೂರು: ಬಾಹುಬಲಿ-2 ಚಿತ್ರ ಅಬ್ಬರದ ನಡುವೆ ಹುಚ್ಚ ವೆಂಕಟ್ ಅವರ ಪೊರ್ಕಿ ಹುಚ್ಚ ವೆಂಕಟ್ ಇಂದು ತೆರೆಕಂಡಿದೆ. ಈ ಸಿನಿಮಾ ನೋಡಲು ವೀಕ್ಷಕರು ಇರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಹುಚ್ಚ ವೆಂಕಟ್ ಯೂಟ್ಯೂಬ್‍ನಲ್ಲಿ ವಿಡಿಯೊ ಅಪ್‍ಲೋಡ್ ಮಾಡಿ ತಮ್ಮ ಕೋಪ ವ್ಯಕ್ತ ಪಡಿಸಿದ್ದಾರೆ.

ಹುಚ್ಚ ವೆಂಕಟ್ ಹೇಳಿದ್ದೇನು?
ನನ್ನನ್ನು ತುಳಿಯೋಕೆ ಆಗಲ್ಲ. ನಾನು ಸೂಪರ್ ಸ್ಟಾರ್ ಆಗಾಯ್ತು. ಪ್ರಪಂಚದಲ್ಲಿ ಈ ಸೂಪರ್ ಸ್ಟಾರ್ ಬಿಟ್ರೆ ಬೇರೊಬ್ಬರು ಇದಾರಾ?  ನನ್ನ ವಯಸ್ಸೆಷ್ಟು ? ನಾಚ್ಕೆ ಆಗ್ಬೇಕು. ನಿಮ್ಮ ವಯಸ್ಸಿಗೆ ಎಷ್ಟು ಸಾಧನೆ ಮಾಡಿದ್ದೀರಾ? ಇಲ್ಲಿಂದ ನಾನು ಪಾಕಿಸ್ತಾನಕ್ಕೋಗಿದ್ದೀನಿ. ಅಮೆರಿಕಕ್ಕೋಗಿದ್ದೀನಿ, ಚೈನಾಕ್ಕೆ ಹೋಗಿದ್ದೀನಿ. ಜಪಾನ್‍ಗೆ ಹೋಗಿದ್ದೀನಿ, ಜರ್ಮನಿಗೆ. ಲಂಡನ್‍ಗೆ ಹೋಗಿದ್ದೀನಿ, ಸಿನಿಮಾದಿಂದ ಅಲ್ಲ ಕಣ್ರೋ ಮನಸ್ಸಿನಿಂದ, ನನ್ನ ಬ್ರೈನ್‍ನಿಂದ. ಇವತ್ತು ಅಲ್ಲಿ ಕೂಡಾ ಸಿನಿಮಾ ಓಡ್ತಾ ಇದೆ. ನಾಚ್ಕೆ ಆಗ್ಬೇಕು ನನ್ ಮಕ್ಕಳ್ರಾ. ನನ್ ಮಗಂದ್ ಡೋಲು ಹೊಡೀಲಿ, ಇವತ್ತು ಎಷ್ಟು ಜನ ತೆಲುಗು ಪಿಕ್ಚರ್ ನೋಡ್ತಾರೆ ಗೊತ್ತಾ,  ಅದರ ಅರ್ಧದಷ್ಟು ಕನ್ನಡಿಗರು.

ಬೇಕಾದ್ರೆ ತೆಲುಗಿನವರಿಗೆ ಮಾರಿ ಬಿಡ್ತೀರಿ. ನೆಕ್ಸ್ಟ್ ಏನಾಗ್ತಿದೆ ಗೊತ್ತಾ? ಬೆಂಗಳೂರು ಫಾರ್ ಹೈದರಾಬಾದ್ ಸೇಲ್, ಹೈದ್ರಾಬಾದ್‍ನವರು ಪರ್ಚೇಸ್ ಮಾಡ್ತಾರೆ. ನೆಕ್ಸ್ಟ್  ಒಂದು  ಜಾಗ ತಮಿಳಿನವರು  ಪರ್ಚೇಸ್ ಮಾಡ್ತಾರೆ, ಇನ್ನೊಂದ್ ಜಾಗ ನಾರ್ಥ್ ಇಂಡಿಯನ್ಸ್ ಪರ್ಚೇಸ್  ಮಾಡ್ತಾರೆ.
ಥೂ..ನನ್ ಮಕ್ಳಾ,  ತಾಯೀನಾ ನೋಡ್ಕೊಳ್ಳೋಕೆ ಯೋಗ್ಯತೆ ಇಲ್ಲದ ನನ್ ಮಕ್ಳಾ, ಯಾವತ್ತಾದ್ರೂ ನಿಮ್ಮ ತಾಯಿಗೊಂದು ಜತೆ ಸೀರೆ, ಚಪ್ಪಲಿ ಕೊಡಿಸಿದ್ರಾ (ಕೆಲವೊಂದು ಬೈಗುಳ ಪದವನ್ನು ನಾವಿಲ್ಲಿ ಬರೆಯುತ್ತಿಲ್ಲ)

ADVERTISEMENT

ನೋಡೋ ಹೇಳ್ತಾ ಇದ್ದೀನಿ,  ನಾನು ರಿಕ್ವೆಸ್ಟ್ ಮಾಡುವ ಅಭ್ಯಾಸ ಇಲ್ಲ. ನಾನು ಸೂಪರ್ ಸ್ಟಾರ್ ಆಗಾಯ್ತು, ಅರ್ಥ ಆಯ್ತಾ?
ನನ್ನ ಸ್ಥಾನಾನ ಇನ್ನೊಬ್ಬ ಹೀರೋ, ನನ್ನ ಎಕ್ಡಾ  ತೆಗೆಳೋಕೆ ಆಗಲ್ಲ, ಬಟ್ ಒಂದು ಹೇಳ್ತೀನಿ. ಮನುಷ್ಯತ್ವ  ಇರ್ಬೇಕು. ಹುಚ್ಚ ವೆಂಕಟ್  ಆಸೆ ಪಡೋದು ಏನು?  ನನ್ ಮಕ್ಳಾ ..ನೀವು ಹೀಗೆ ಮಾಡಿ ಮಾಡಿ ರೋಡುಗಳು ಮಾರಾಗೋಯ್ತು, ಇನ್ನು ಮನೆಗಳನ್ನು ಮಾರ್ತೀರಾ, ನಿಮ್ಮ ತಾಯೀನ, ಅಣ್ಣನ್ನ, ಅಕ್ಕನ್ನ ಬೇರೆ ಎಲ್ಲ ದೇಶಕ್ಕೆ ಮಾರಿ, ಅಷ್ಟಕ್ಕೆ ನಿಮ್ಮನ್ನು ಬದುಕಲು ಬಿಡ್ತೀನಾ?

ಎಲ್ಲಿದ್ಯಾ, ಸಾಯಿಸಿ ಬಿಡ್ತೀನಿ. ಕನ್ನಡ ಸಿನಿಮಾ  ನೋಡಿ. ಅಕಸ್ಮಾತ್ ನನ್ನ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಬೈರಿ, ಇಲ್ಲೇ ಇರ್ತೀನಿ, ಬೈದ್ರೂ ನಿಮ್ಮನ್ನು ಸಾಯಿಸ್ತೀನಿ, ಸಿನಿಮಾ ಚೆನ್ನಗಿದ್ರೂ ಬೈತೀರಿ ಅಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.