ADVERTISEMENT

ಬಹುಪರಾಕ್! ನಾಯಕಿಯ ಕಣ್ಣಲ್ಲಿ...

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

* ಕಥೆಯಲ್ಲಿ, ತಂತ್ರಜ್ಞಾನದಲ್ಲಿ, ಲೊಕೇಶನ್ ಆಯ್ಕೆ ಹಾಗೂ ಮೇಕಿಂಗ್‌ನಲ್ಲಿ ‘ಬಹುಪರಾಕ್’ ಭಿನ್ನವಾದ ಚಿತ್ರ. ಮೂರು ಬೇರೆ ಬೇರೆ ಸಣ್ಣಕಥೆಗಳು ಮುಖ್ಯ ಕಥೆಯಲ್ಲಿವೆ. ಆ ಕಥೆಗಳು ಯಾವ ರೀತಿ ಸಾಗುತ್ತವೆ ಎನ್ನುವುದೇ ವಿಶೇಷ. ಸ್ಯಾಂಡಲ್‌ವುಡ್‌ನಲ್ಲಿ ಈ ರೀತಿಯ ಸಿನಿಮಾ ಖಂಡಿತಾ ಬಂದಿಲ್ಲ. ಕನ್ನಡದಲ್ಲಿ ಟ್ರೆಂಡ್‌ಸೆಟ್ಟರ್ ಆಗಿ ‘ಬಹುಪರಾಕ್’ ರೂಪುಗೊಳ್ಳುತ್ತದೆ.

* ‘ಪ್ಯಾರಲಲ್‌ ಸ್ಟೋರಿ ಟೆಲ್ಲಿಂಗ್’ ಮಾದರಿಯನ್ನು ಬಳಸಿಕೊಂಡಿದ್ದೇವೆ. ಟಿಪಿಕಲ್–ಕಮರ್ಷಿಯಲ್ ಸಿನಿಮಾ ಎನಿಸುತ್ತದೆ. ನಮ್ಮ ಜನರು ಅಪೇಕ್ಷಿಸುವ ಹಾಡು–ಹಾಸ್ಯ, ಭಾವುಕತೆ ಎಲ್ಲವೂ ‘ಬಹುಪರಾಕ್‌’ನಲ್ಲಿ ಹದವಾಗಿ ಮಿಶ್ರಣವಾಗಿದೆ. ಅಂದಹಾಗೆ, ಇದು ಪೂರ್ಣ ಪ್ರಮಾಣದ ವ್ಯಾಪಾರಿ ಚಿತ್ರ. ಭಾವನಾ ರಾವ್ ಅವರು ಕುಣಿದಿರುವ ‘ಹಾಡು ಬೇಕಾ ಹಾಡು...’ ಐಟಂ ಸಾಂಗ್ ಸಹ ಪಡ್ಡೆ ಹುಡುಗರಿಗೆ ಮೆಚ್ಚುಗೆಯಾಗುತ್ತದೆ.

* ವಾಟ್ ಇಸ್ ದಿಸ್ ‘ಬಹುಪರಾಕ್’ ಎಂದು ನೀವು ಕೇಳಿದರೆ; ಜೀವನದ ಬಗ್ಗೆ ಫಿಲಾಸಫಿಕಲ್ ಆಗಿರುವ ಕಾನ್‌ಸೆಫ್ಟ್‌ ಅನ್ನು ವ್ಯಾಪಾರಿ ಕೋನದಲ್ಲಿ ಹೇಳಲಾಗಿದೆ ಎನ್ನಬಹುದು. ನಮಗೆ ನಮ್ಮ ಬಗ್ಗೆಯೇ ಹಲವು ಸಂದರ್ಭದಲ್ಲಿ ಪ್ರಶ್ನೆಗಳು, ಸಂಗತಿಗಳು ಕಾಡುತ್ತವೆ. ಈ ಕಾಡುವಿಕೆ ಮತ್ತು ಪ್ರಶ್ನೆಗಳ ಬಗ್ಗೆ ನಮ್ಮನ್ನು ಜಾಗೃತಗೊಳಿಸುವುದೇ ‘ಬಹುಪರಾಕ್’. 

* ಕಿಟ್ಟಿ ಅವರದ್ದು ಮೂರು ಆಯಾಮದ ಪಾತ್ರವಾದರೆ ನನ್ನದು ದ್ವಿಪಾತ್ರ. ನನ್ನ ವೃತ್ತಿ ಬದುಕಿನಲ್ಲಿ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ.

* ನಾನು ಇಲ್ಲಿಯವರೆಗೂ ನಟಿಸಿರುವ ನಟರಲ್ಲಿ ಕಿಟ್ಟಿ ಬಹಳ ಸ್ನೇಹಮಯಿ. ಸೆಟ್‌ನಲ್ಲೂ ನಾವು ಸ್ನೇಹದಿಂದ – ಖುಷಿಯಿಂದ ಇದ್ದೆವು. ವೈಯಕ್ತಿಕವಾಗಿ ನನಗೆ ಬಹುದೊಡ್ಡ ಖುಷಿ ಕೊಟ್ಟಿದೆ ಈ ಚಿತ್ರ.

* ‘ರಾಜಾಹುಲಿ’ ನಂತರ ನನ್ನ ಲುಕ್‌ ಮತ್ತು ಕಥೆ ಬದಲಾಗಬೇಕಿತ್ತು. ಆ ಅವಕಾಶ ಇಲ್ಲಿ ಸಿಕ್ಕಿದೆ.

* ‘ಬಹುಪರಾಕ್’ ಚಿತ್ರವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. 

* ನಿರ್ದೇಶಕ ಸುನಿ ಅವರ ಒಂದು ವರ್ತನೆಯನ್ನು ಈ ಚಿತ್ರದ ಮೂಲಕ ನಾನು ಬದಲಿಸಿದ್ದೇನೆ. ಅವರು ಅವರ ಅಕ್ಕನನ್ನು ಬಿಟ್ಟು ಬೇರೆ ಹುಡುಗಿಯ ಜತೆ ಮಾತನಾಡುವವರು ಅಲ್ಲವಂತೆ. ಚಿತ್ರೀಕರಣದ ಸಂದರ್ಭದಲ್ಲೂ ಅದು ನನ್ನ ಅನುಭವಕ್ಕೆ ಬಂದಿತ್ತು. ನಾನು ಅವರ ಕಾಲೆಳೆದೆ. ಕೀಟಲೆ ಮಾಡಿದೆ. ಚಿತ್ರ ಪೂರ್ಣವಾಗುವುದರಲ್ಲಿ ಅವರು ಹುಡುಗಿಯರ ಜತೆ ಮಾತನಾಡುವ ರೀತಿ ಮಾಡಿದೆ. ನಾನು ಮೇಕಪ್ ಮಾಡಿಕೊಂಡು ಬರುವುದು ತಡವಾದ ಸಂದರ್ಭದಲ್ಲಿ ಅವರೂ ನನ್ನನ್ನು ತಮಾಷೆ ಮಾಡಿದ್ದಾರೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.