ADVERTISEMENT

ಬಿಗ್‌ ಬಿ ಜೊತೆಗೆ ಕೆಲಸ ಮಾಡುವ ಕನಸು ನನಸಾಗಲಿದೆ: ವಿಜಯ್‌ ಕೃಷ್ಣಾ ಆಚಾರ್ಯ

ಪಿಟಿಐ
Published 4 ಜನವರಿ 2017, 12:14 IST
Last Updated 4 ಜನವರಿ 2017, 12:14 IST
ವಿಜಯ್‌ ಕೃಷ್ಣಾ ಆಚಾರ್ಯ
ವಿಜಯ್‌ ಕೃಷ್ಣಾ ಆಚಾರ್ಯ   

ಮುಂಬೈ: ಬಿ–ಟೌನ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ‘ಥಗ್ಸ್‌ ಆಫ್‌ ಹಿಂದೂಸ್ಥಾನ್‌’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ವಿಜಯ್‌ ಕೃಷ್ಣಾ ಆಚಾರ್ಯ ನಿರ್ದೇಶಿಸಿದ್ದಾರೆ.

‘ಥಗ್ಸ್‌ ಆಫ್‌ ಹಿಂದೂಸ್ಥಾನ್‌’ ಚಿತ್ರದ ಮೂಲಕ ‘ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರೊಂದಿಗೆ ಕೆಲಸ ಮಾಡುವ ಕನಸು ನನಸಾಗಲಿದೆ’ ಎಂದು ನಿರ್ದೇಶಕ ವಿಜಯ್‌ ಕೃಷ್ಣಾ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಅಮಿತಾಬ್‌ ಬಚ್ಚನ್‌ ಒಬ್ಬ ಅತ್ಯುತ್ತಮ ನಟ, ಹಲವು ಸಿನಿಮಾಗಳನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತಿ ಅವರದ್ದು, ಒಬ್ಬ ಅಭಿಮಾನಿಯಾಗಿ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿರುವುದನ್ನು ಸಂಭ್ರಮಿಸುತ್ತಿದ್ದೇನೆ. ಇದರೊಂದಿಗೆ ಕಾತುರವೂ ಹೆಚ್ಚಿದೆ’ ಎಂದು ಹೇಳಿದ್ದಾರೆ.

‘ಥಗ್ಸ್‌ ಆಫ್‌ ಹಿಂದೂಸ್ಥಾನ್‌’ ಚಿತ್ರ 2018 ರ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಅಮೀರ್ ಖಾನ್‌, ಅಭಿಷೇಕ್‌ ಬಚ್ಚನ್‌, ಕತ್ರಿನಾ ಕೈಫ್, ಉದಯ್‌ ಚೋಪ್ರಾ ಹಾಗೂ ಸಿದ್ಧಾರ್ಥ್‌ ನಿಗಮ್‌ ಅಭಿನಯಾದ ‘ಧೂಮ್‌– 3’ ಚಿತ್ರವನ್ನು ವಿಜಯ್‌ ಕೃಷ್ಣಾ ಆಚಾರ್ಯ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT