ADVERTISEMENT

ಯಲಹಂಕದಲ್ಲಿ ‘ಮರಿ ಟೈಗರ್’

ಸಿನಿ ಸಂಕ್ಷಿಪ್ತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2016, 19:30 IST
Last Updated 22 ಸೆಪ್ಟೆಂಬರ್ 2016, 19:30 IST
5ಜಿ ಪ್ರವೀಣ್, ನಿಧಿ ಸುಬ್ಬಯ್ಯ
5ಜಿ ಪ್ರವೀಣ್, ನಿಧಿ ಸುಬ್ಬಯ್ಯ   

ವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್’ ಚಿತ್ರದ ಶೂಟಿಂಗ್ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ನಡೆಯಿತು. ರೈಲ್ವೆ ಭೋಗಿ ಹಾಗೂ ನಿಲ್ದಾಣದ ಸುತ್ತಮುತ್ತ ನಡೆದ ಸಾಹಸ ದೃಶ್ಯಗಳನ್ನು ಜೈ ಆನಂದ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಪಿ.ಎನ್. ಸತ್ಯ ನಿರ್ದೇಶನದ ಈ ಚಿತ್ರಕ್ಕೆ ರಮೇಶ್ ಕಶ್ಯಪ್ ಬಂಡವಾಳ ಹಾಕುತ್ತಿದ್ದಾರೆ. ತೇಜು ನಾಯಕಿಯಾಗಿ ನಟಿಸಿದ್ದಾರೆ.  ಅಜಯ್ ಕುಮಾರ್ ಕಥೆಯ ಚಿತ್ರಕ್ಕೆ  ಮಲೇಷ್ಯಾದ ರಾಕ್ ರವಿ ಸಂಗೀತ ನಿರ್ದೇಶನವಿದೆ.

ಮಾತು ಮುಗಿಸಿದ ‘5ಜಿ’
ಜಗದೀಶ್ ನಿರ್ಮಾಣದ ‘5ಜಿ’ ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ. ಪ್ರವೀಣ್ ಹಾಗೂ  ನಿಧಿ ಸುಬ್ಬಯ್ಯ ಚಿತ್ರದ ನಾಯಕ– ನಾಯಕಿ. ಅನಿವಾಶ್, ಸಾಧುಕೋಕಿಲ, ‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್ ತಾರಾಗಣವಿರುವ ಚಿತ್ರಕ್ಕೆ  ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ  ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ. 

‘ರಿಕ್ತ’ಕ್ಕೆ ಯು/ಎ ಪ್ರಮಾಣಪತ್ರ
ಅಮೃತ್ ಕುಮಾರ್ ನಿರ್ದೇಶನದ ‘ರಿಕ್ತ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ  ಪ್ರಮಾಣಪತ್ರ ನೀಡಿದೆ. ಅಮೃತ್  ಚೊಚ್ಚಲ ನಿರ್ದೇಶನದ ಸಿನಿಮಾ  ಇದು. ಚಿತ್ರದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಸಂಚಾರಿ ವಿಜಯ್ ವಿಭಿನ್ನವಾಗಿ ಕಾಣಿಸಿಕೊಂಡು ಗಾಯಕರಾಗಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಿಕ್ಕಿ ಸೋನು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಅರುಣ್ ಕುಮಾರ್ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT