ADVERTISEMENT

ವ್ಯಾಪಾರಿ ದೃಷ್ಟಿಯಿಂದ ಚಿತ್ರ ಆಯ್ಕೆ ಮಾಡಿಕೊಳ್ಳುವುದಿಲ್ಲ, ಸೃಜನಶೀಲತೆ ಮುಖ್ಯ: ಅಮೀರ್‌ ಖಾನ್‌

ಪಿಟಿಐ
Published 6 ಫೆಬ್ರುವರಿ 2017, 9:57 IST
Last Updated 6 ಫೆಬ್ರುವರಿ 2017, 9:57 IST
ಅಮೀರ್‌ ಖಾನ್‌
ಅಮೀರ್‌ ಖಾನ್‌   

ಮುಂಬೈ:  ಒಂದರ ನಂತರ ಮತ್ತೊಂದರಂತೆ ಅತ್ಯುತ್ತಮ ಯಶಸ್ಸಿನ ಚಿತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿದ ಬಾಲಿವುಡ್‌ ನಟ ಅಮೀರ್‌ ಖಾನ್‌, ತಮ್ಮ ಮುಂದಿನ ಚಿತ್ರದ ಮೇಲೆ ಬಾಕ್ಸ್‌ ಆಫೀಸ್‌ ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

51 ವರ್ಷದ ನಟ ಅಮೀರ್‌ ಖಾನ್‌ ಅಭಿನಯಾದ ‘3 ಈಡಿಯಟ್ಸ್’, ‘ಧೂಮ್ 3’, ‘ಪಿಕೆ’,  ಹಾಗೂ ‘ದಂಗಲ್‌’ ಚಿತ್ರಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಯಶಸ್ಸಿನೊಂದಿಗೆ ಹೊಸ ದಾಖಲೆಗಳನ್ನು ನಿರ್ಮಿಸಿದ್ದವು.

‘ನಾನು ಕೇವಲ ವ್ಯಾಪಾರ ದೃಷ್ಟಿಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನನ್ನ ಹೃದಯ ಸ್ವರ್ಶಿಸುವಂತಹ ಸಿನಿಮಾಗಳಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

ನಿರ್ದೇಶಕ ನಿತೀಶ್‌ ತಿವಾರಿ ಕುರಿತು ಮಾತನಾಡಿದ ಆಮೀರ್‌, ‘ಅವರು ಬಾಲಿವುಡ್ ಚಿತ್ರರಂಗವನ್ನಷ್ಟೇ ಕೇಂದ್ರೀಕರಿಸಿ ಚಿತ್ರಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಹೊಸ ಪ್ರವೃತ್ತಿಯನ್ನು ಇತರರು ಅನುಸರಿಸುವಂತಹ ಚಿತ್ರಗಳನ್ನು ಪರಿಚಯಿಸುತ್ತಾರೆ ಎಂದರು.

‘ದಂಗಲ್‌’ ಚಿತ್ರದಲ್ಲಿ ರೋಮಾಂಚನಕಾರಿಯಾದ ಹಾಡುಗಳಿಲ್ಲ, ನಾನು ದಡೂತಿ ದೇಹಕಾರವುಳ್ಳ ಹಿರಿಯ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರ ಯಶಸ್ಸಿನ ಬಗ್ಗೆ ತೋರ್ಪಡಿಕೆಯಿಂದ ಮಾತನಾಡುತ್ತಿಲ್ಲ. ‘ನಾನು ಕೇವಲ ವ್ಯಾಪಾರಿ ದೃಷ್ಟಿಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ಸೃಜನಶೀಲ ವ್ಯಕ್ತಿತ್ವವುಳ್ಳವರೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನ ನಿಷೇಧದಿಂದ ದಂಗಲ್‌ ಚಿತ್ರದ ಮೇಲಾದ ಪರಿಣಾಮದ ಬಗ್ಗೆ ಮಾತನಾಡಿದ ಅಮೀರ್‌ ‘ಚಿತ್ರದ ವಿತರಕರು ಆದರ ಬಗ್ಗೆ ಅಲೋಚಿಸುತ್ತಾರೆ. ಪ್ರಸ್ತುತ ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಯಾವುದೇ ಸಮಸ್ಯೆಗಳಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.