ADVERTISEMENT

ಶಿಬಾನಿ ಫಿಟ್‌ನೆಸ್ ಮಂತ್ರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST
ಶಿಬಾನಿ ಫಿಟ್‌ನೆಸ್ ಮಂತ್ರ
ಶಿಬಾನಿ ಫಿಟ್‌ನೆಸ್ ಮಂತ್ರ   

ಫಿಟ್‌ನೆಸ್‌ ಎನ್ನುವುದು ದೇಹ, ಮನಸ್ಸು ಹಾಗೂ ಆತ್ಮದ ಒಟ್ಟಾರೆ ಫಲಿತಾಂಶ ಎನ್ನುವುದು ನಟಿ, ಗಾಯಕಿ ಶಿಬಾನಿ ಕಶ್ಯಪ್ ಅವರ ವ್ಯಾಖ್ಯಾನ. ಒಟ್ಟಾರೆ ಆರೋಗ್ಯ ಎಂದರೆ ಅದು ದೈಹಿಕ ಫಿಟ್‌ನೆಸ್‌ಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಮನಸ್ಸು ಮತ್ತು ಆತ್ಮದ ಸ್ವಾಸ್ಥ್ಯವೂ ಆಗಿದೆ ಎಂದಿದ್ದಾರೆ ಶಿಬಾನಿ.

‘ನಾನು ತುಂಬಾ ಕಠಿಣವಾದ ಫಿಟ್‌ನೆಸ್ ಕ್ರಮವನ್ನು ಅನುಸರಿಸುತ್ತೇನೆ. ಪ್ರತಿದಿನ ಯೋಗ, ವ್ಯಾಯಾಮ ಮಾಡುತ್ತೇನೆ. ತಿನ್ನುವುದರಲ್ಲಿಯೂ ಚೂಸಿ’ ಎಂದು ಅವರು ಹೇಳಿಕೊಂಡಿದ್ದಾರೆ.

ಹೆಚ್ಚುವರಿ ಮೇಕಪ್‌ ಮಾಡಿಕೊಳ್ಳುವುದರಿಂದ ಅದು ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ತಾವು ಡೆಟಾಕ್ಸ್ ಥೆರಪಿ ಮತ್ತು ಸ್ಪಾಗಳ ಮೊರೆಹೋಗುವುದಾಗಿಯೂ ಶಿಬಾನಿ ತಿಳಿಸಿದ್ದಾರೆ.

‘ಏಕ್ ವೀರ್ ಕಿ ಅರ್ದಾಸ್... ವೀರಾ’ ಟಿವಿ ಶೋದಲ್ಲಿ ಮೇಘಾ ಪಾತ್ರವನ್ನು ವಹಿಸಿಕೊಂಡಿರುವ ಶಿಬಾನಿ, ಅದು ತಮಗಾಗಿ ರೂಪಿಸಲಾದ ತಮ್ಮದೇ ಪಾತ್ರ. ಹೀಗಾಗಿ ತಮ್ಮ ಸ್ವಂತ ಸ್ಟೈಲ್‌ ಅನ್ನು ಮೇದಿಕೆ ಮೇಲೆ ತರಲು ಮತ್ತು ದೈನಂದಿನ ಜೀವನದಲ್ಲಿ ತಾವು ತೊಡುವ ವಸ್ತ್ರವನ್ನೇ ಇಲ್ಲಿಯೂ ತೊಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಅನೇಕ ಫ್ಯಾಷನ್ ಡಿಸೈನರ್‌ಗಳ ವಿನ್ಯಾಸಗಳಿಗೆ ರೂಪರ್ಶಿಯಾಗಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿರುವ ಅವರು, ಫ್ಯಾಷನ್ ಶೋಗಳು ಸಹ ತಮ್ಮ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಎಂದಿದ್ದಾರೆ.

ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಶಿಬಾನಿ ಹೇಳಿರುವ ಕೆಲವು ಟಿಪ್ಸ್ ಇಲ್ಲಿವೆ:
*ಪ್ರತಿದಿನದ ಮುಂಜಾನೆಯನ್ನು ಒಂದು ಗ್ಲಾಸ್ ತಾಜಾ ಹಣ್ಣಿನ ರಸದೊಂದಿಗೆ ಆರಂಭಿಸಿ, ಸಾಕಷ್ಟು ನೀರು ಕುಡಿಯಿರಿ
*ಕರಿದ ತಿಂಡಿಯನ್ನು ಕಡಿಮೆ ಮಾಡಿ
*7.30 ಅಥವಾ 8 ಗಂಟೆಯ ಒಳಗೆ ರಾತ್ರಿ ಊಟ ಮುಗಿಸಲು ಪ್ರಯತ್ನಿಸಿ
*ನಿಮ್ಮ ದೈಹಿಕ ಸಾಮರ್ಥ್ಯ ಹಾಗೂ ಅಗತ್ಯಕ್ಕೆ ತಕ್ಕಂತೆ ವ್ಯಾಯಾಮ ರೂಢಿಸಿಕೊಳ್ಳಿ
*ವಾಕಿಂಗ್ ಮಾಡುವುದನ್ನು ಮರೆಯಬೇಡಿ
*ಸಾಧ್ಯವಾದಷ್ಟು ಕಡಿಮೆ ಮೇಕಪ್ ಮಾಡಿಕೊಳ್ಳಿ
*ವಿಶ್ವಾಸವಿರುವ ಉತ್ಪನ್ನಗಳನ್ನು ಉಪಯೋಗಿಸಿ
*ಮಲಗುವ ಮುನ್ನ ಮರೆಯದೇ ಮೇಕಪ್‌ ಅನ್ನು ಸ್ಕ್ರಬ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.