ADVERTISEMENT

‘ಸಿಗ್ನೇಚರ್’ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ಪೂರ್ಣಿಮಾ ಭಾಸ್ಕರ್ ತೆಕ್ಕಟ್ಟೆ ನಿರ್ಮಿಸುತ್ತಿರುವ ‘ಸಿಗ್ನೇಚರ್’ ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಕುಂದಾಪುರ, ಮರವಂತೆ, ತೆಕ್ಕಟ್ಟೆ ಸುತ್ತಮುತ್ತ ಹತ್ತು ದಿನಗಳ ಕಾಲ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಮಯೂರಿ, ರಂಜಿತ್, ಬೇಬಿ ಮಾನ್ಯ, ಬಚ್ಚನ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಗುರು ಮದ್ಲೇಸರ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ವಿ. ಮನೋಹರ್, ನಾಗೇಂದ್ರಪ್ರಸಾದ್, ಕೆ. ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ. ಸುಧಾರಾಣಿ, ಸೂರ್ಯಕಿರಣ್, ಸುನೀಲ್ ಪುರಾಣಿಕ್, ಗಿರೀಶ್ ಜತ್ತಿ, ಪಚ್ಚಿ ಆತೂರು, ಬಚ್ಚನ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT