ADVERTISEMENT

ಸಿನಿಮಾ-ಟಿ.ವಿ. ಡೈರೆಕ್ಟರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2015, 19:38 IST
Last Updated 19 ನವೆಂಬರ್ 2015, 19:38 IST

ಕಿರುತೆರೆ, ಬೆಳ್ಳಿತೆರೆ ಕಲಾವಿದರು ಹಾಗೂ ತಂತ್ರಜ್ಞರ ದೂರವಾಣಿ ಸಂಖ್ಯೆ, ಇ ಮೇಲ್ ಮತ್ತು ಅವರ ಬಗ್ಗೆ ಕಿರು ಮಾಹಿತಿ ನೀಡುವ ‘ಸಿನಿಮಾ- ಟಿ.ವಿ. ಡೈರೆಕ್ಟರಿ 7’ನೇ ಆವೃತ್ತಿ ಬಿಡುಗಡೆಯಾಗಿದೆ. ಕಳೆದ ಮೂರು ವರುಷಗಳ ಹಿಂದೆ ಡೈರೆಕ್ಟರಿಯ 6ನೇ ಆವೃತ್ತಿ ಬಿಡುಗಡೆಯಾಗಿತ್ತು. ಈ ಹೊಸ ಆವೃತ್ತಿಯಲ್ಲಿ ಹೊಸ ವಿಳಾಸ–ದೂರವಾಣಿ ಸಂಖ್ಯೆಗಳನ್ನು ಸೇರಿಸಲಾಗಿದೆ.

ಸಿನಿಮಾ ಪ್ರಚಾರಕ ಎಂ.ಜಿ. ಲಿಂಗರಾಜ್  ‘ಸಿನಿಮಾ– ಟಿ.ವಿ. ಡೈರೆಕ್ಟರಿ’ ರೂವಾರಿ. ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಟಿ ಅಮೂಲ್ಯ ಮತ್ತಿತರರು ನೂತನ ಡೈರೆಕ್ಟರಿ ಬಿಡುಗಡೆ ಮಾಡಿದರು.

‘ಕಿರುತೆರೆ– ಚಿತ್ರರಂಗದ ಎಲ್ಲಾ ವಿಭಾಗದ ಪಟ್ಟಿ ತಯಾರಿಸುವುದು ಕಷ್ಟದ ಕೆಲಸ. ಲಿಂಗರಾಜು ಶ್ರಮ ಹಾಕಿ ಇದನ್ನು ಸಾಧಿಸಿದ್ದಾರೆ’ ಎಂದರು ಎಸ್.ಕೆ. ಭಗವಾನ್. ಎಂ.ಜಿ.ಲಿಂಗರಾಜು, ‘ಈವರೆಗೆ 6 ಆವೃತ್ತಿಗಳನ್ನು ತಂದಿದ್ದರೂ ಲಾಭ ಬಂದಿಲ್ಲ. ಚಿತ್ರರಂಗದ ಎಲ್ಲಾ ವಿಭಾಗಗಳ ಸದಸ್ಯರು ಪುಸ್ತಕ ಖರೀದಿಸಿದರೆ ಬಂಡವಾಳ ವಾಪಸ್ ಬರುತ್ತದೆ.   ಚಿತ್ರರಂಗದವರನ್ನು ಬಿಟ್ಟು ಬೇರೆ ಯಾರಿಗೂ ಈ ಪುಸ್ತಕ ಮಾರಾಟ ಮಾಡುತ್ತಿಲ್ಲ ಎಂದರು. ಸಮಾರಂಭದಲ್ಲಿ ನಟಿ ಅಮೂಲ್ಯ, ಲೋಕೇಶ್‌ ರೆಡ್ಡಿ, ನಟ ಶ್ರೀಧರ್, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಇತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.