ADVERTISEMENT

ಸೀರೆಯುಟ್ಟ ಫಾತಿಮಾ ಸನಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 12:51 IST
Last Updated 14 ಅಕ್ಟೋಬರ್ 2017, 12:51 IST
ಸೀರೆಯುಟ್ಟ ಫಾತಿಮಾ ಸನಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌
ಸೀರೆಯುಟ್ಟ ಫಾತಿಮಾ ಸನಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌   

ಮುಂಬೈ: ‘ದಂಗಲ್‌’ ನಟಿ ಫಾತಿಮಾ ಸನಾ ಶೇಖ್‌ ಸೀರೆಯುಟ್ಟ ಕಾರಣಕ್ಕೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೋಲ್‌ ಆಗಿದ್ದಾರೆ!

ಸೀರೆಯುಟ್ಟ ಸ್ವಂತೀ ಚಿತ್ರವೊಂದನ್ನು ‘ಶೇಮ್‌ಲೆಸ್‌ ಸೆಲ್ಫೀ’ (Shameless selfie) ಎಂಬ ಬರಹದೊಂದಿಗೆ ಫಾತಿಮಾ ಅಕ್ಟೋಬರ್‌ 8ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರ ಈವರೆಗೆ 81 ಸಾವಿರಕ್ಕೂ ಹೆಚ್ಚು ಲೈಕ್‌ ಪಡೆದುಕೊಂಡಿದೆ. ಆದರೆ, ಫಾತಿಮಾ ಸೀರೆ ಉಟ್ಟಿರುವ ರೀತಿಯ ಬಗ್ಗೆ ಹಲವರು ಆಕ್ಷೇಪಿಸಿದ್ದಾರೆ.

‘ಸೊಂಟ ಕಾಣುವಂತೆ ಸೀರೆ ಉಟ್ಟು ನಾಚಿಕೆ ಇಲ್ಲದೆ ಸೆಲ್ಫಿ ತೆಗೆದು ಪೋಸ್ಟ್‌ ಮಾಡಿದ್ದೀರಿ’ ಎಂದು ಹಲವರು ಕಮೆಂಟ್‌ಗಳಲ್ಲಿ ಟೀಕಿಸಿದ್ದಾರೆ.

ADVERTISEMENT

ಕೆಲವರು ಫಾತಿಮಾ ಪರವಾಗಿ ಕಮೆಂಟ್‌ ಮಾಡಿದ್ದಾರೆ. ‘ಜನ ಏನೆನ್ನುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಚೆನ್ನಾಗಿ ಕಾಣುತ್ತಿದ್ದೀರಿ’ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.