ADVERTISEMENT

ಸ್ವಾಭಿಮಾನಿ ಸನ್ನಿಲಿಯಾನ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ರಾಗಿಣಿ ಎಂಎಂಎಸ್ 2 ಹೆಸರು ಕೇಳುತ್ತಿದ್ದಂತೆ ಯುವಕರ ಎದೆಯಲ್ಲಿ ಢವಢವ, ತಲ್ಲಣಗಳು, ಪುಳಕಗಳು ಶುರುವಾಗಬಹುದು. ಈ ಸಿನಿಮಾದ ನಟಿ ಸನ್ನಿ ಲಿಯಾನ್‌ ಮಾಡಿದ ಮೋಡಿ ಹಾಗಿದೆ. ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡು ಪಡ್ಡೆಗಳ ಮೈಮನಸ್ಸನ್ನು ತಲ್ಲಣಗೊಳಿಸಿ ಇದೀಗ ಬಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವ ಸನ್ನಿ ಲಿಯಾನ್‌ ಹೊಸ ಸಿನಿಮಾ ಮೂಲಕ ಜನರಿಗೆ ಹೊಸ ರೂಪದಲ್ಲಿ ಹತ್ತಿರವಾಗಿದ್ದಾರೆ.

‘ಸಿನಿಮಾದಲ್ಲಿ ನಟಿಯಾಗುವುದಕ್ಕಿಂತಲೂ ಮುನ್ನ ನನ್ನ ಹಿನ್ನೆಲೆ ಏನು ಎಂಬ ಬಗೆಗೆ ಎಂದೂ ಬೇಸರಪಟ್ಟುಕೊಳ್ಳುವುದಿಲ್ಲ. ಅಸಹ್ಯದ ಭಾವನೆಯನ್ನು ಮೂಡಿಸಿಕೊಳ್ಳಲೂ ನನಗಿಷ್ಟವಿಲ್ಲ. ಇದುವರೆಗೆ ನನ್ನ ಬದುಕಿನಲ್ಲಿ ಏನೆಲ್ಲಾ ಮಾಡಿದ್ದೇನೋ, ನಿರ್ಧಾರ ತೆಗೆದುಕೊಂಡಿದ್ದೆನೊ ಅದೇ ನನ್ನ ಇಂದಿನ ಈ ಸ್ಥಿತಿಗೆ ಕಾರಣ’ ಎಂದು ಬೋಲ್ಡ್‌ ಆಗಿ ಉತ್ತರಿಸಿದ್ದಾರೆ ಸನ್ನಿ.

ಬದುಕಿನ ಖುಷಿಯ ಹಾಗೂ ತಲ್ಲಣದ ಸಂದರ್ಭದಲ್ಲಿ ಸನ್ನಿ ಜೀವಿಸುತ್ತಿದ್ದಾರಂತೆ. ಬ್ಲ್ಯೂ ಸಿನಿಮಾಗಳಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದೇ ಇವತ್ತಿಗೆ ದಕ್ಕುತ್ತಿರುವ ಅವಕಾಶಗಳ ಮೂಲ ಎಂಬುದು ಅವರ ಭಾವನೆ. ಹೀಗಾಗಿಯೇ ಮಾಡಿದ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವ ಮನಸ್ಸು ಅವರಿಗಿಲ್ಲವಂತೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸಿದ್ದ ಸನ್ನಿ ಬಿಗ್‌ ಬಾಸ್‌ 5, ಜಿಸ್ಮ್‌ 2, ಈಗ ರಾಗಿಣಿ ಎಂಎಂಎಸ್‌ ಮೂಲಕ ಬಾಲಿವುಡ್‌ ಗಲ್ಲಿಯಲ್ಲಿ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.