ADVERTISEMENT

ಹಳೆ ವಿನ್ಯಾಸಕ್ಕೆ ಹೊಸ ಮೆರುಗು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಭುಜದ ಚೆಲುವು ಬಿಂಬಿಸುವ ದಿರಿಸುಗಳನ್ನು ಧರಿಸುವ ಮೋಹ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಬಾಲಿವುಡ್‌ ನಟಿಯರಾದ ಸೋನಾಕ್ಷಿ ಸಿನ್ಹಾ, ನರ್ಗಿಸ್‌ ಫಕ್ರಿ, ದೀಪಿಕಾ ಪಡುಕೋಣೆ ಶೋಲ್ಡರ್‌ ಕಟ್‌ ವಸ್ತ್ರಗಳ ಬಗ್ಗೆ ಸಿಕ್ಕಾಪಟ್ಟೆ ಮೋಹ ಬೆಳೆಸಿಕೊಂಡಿದ್ದಾರಂತೆ.

‘ಶೋಲ್ಡರ್‌ ಕಟ್‌ ದಿರಿಸು 80ರ ದಶಕದಲ್ಲಿ ತುಂಬ ಜನಪ್ರಿಯತೆಗಳಿಸಿತ್ತು. ಅದೇ ಸ್ಫೂರ್ತಿಯಿಂದ ನಾನು ಹೊಸ ಬಗೆಯಲ್ಲಿ ಶೋಲ್ಡರ್‌ ಕಟ್‌ ವಸ್ತ್ರ ವಿನ್ಯಾಸ ಮಾಡಿದ್ದೇನೆ. ಶೋಲ್ಡರ್‌ ಕಟ್‌ ಸ್ಕರ್ಟ್‌ಗಳು ಫ್ಯಾಷನ್‌ ಜಗತ್ತಿನಲ್ಲಿ ಹೊಸತೊಂದು ಟ್ರೆಂಡ್‌ ಸೃಷ್ಟಿಸಿವೆ. ಈ ಬಗೆಯ ವಿನ್ಯಾಸ ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸುತ್ತಿದೆ.

ಅಂದಹಾಗೆ, ಡೆನಿಮ್‌ ಹಾಗೂ ಡ್ರೆಸ್‌ ಜತೆಗೂ ಶೋಲ್ಡರ್‌ ಕಟ್‌ ದಿರಿಸುಗಳನ್ನು ಬಳಸುವ ಟ್ರೆಂಡ್‌ ಹೆಚ್ಚುತ್ತಿದೆ. ಈ ಉಡುಪುಗಳು ಬೇಸಿಗೆಗೆ ಆರಾಮದಾಯಕ ಅನುಭವ ನೀಡುತ್ತವೆ. ಜತೆಗೆ ಸೆಕ್ಸಿ ಲುಕ್‌ ನೀಡುತ್ತವೆ’ ಎನ್ನುತ್ತಾರೆ ಖ್ಯಾತ ವಸ್ತ್ರವಿನ್ಯಾಸಕಿ ಪಾಯಲ್‌ ಸಿಂಘಾಲ್‌.

‘ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ದಿನೇ ದಿನೇ ಪ್ರಯೋಗಗಳು ನಡೆಯುತ್ತಿರುತ್ತವೆ. ಹಾಗಾಗಿ, ಪ್ರತಿ ದಿನವೂ ಒಂದಿಲ್ಲೊಂದು ಹೊಸ ವಿನ್ಯಾಸ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಡುತ್ತಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಶೋಲ್ಡರ್‌ ಕಟ್‌ ವಿನ್ಯಾಸ. ಈ ದಿರಿಸುಗಳು ಮಹಿಳೆಯ ಅಂದವನ್ನು ಮತ್ತಷ್ಟು ಚೆಂದವಾಗಿ ಬಿಂಬಿಸುತ್ತವೆ’ ಎಂದಿದ್ದಾರೆ ಮತ್ತೊಬ್ಬ ವಿನ್ಯಾಸಕ ಗೌರವ್‌ ಗುಪ್ತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT