ADVERTISEMENT

ಹಿಂದಿ ಆಲ್ಬಮ್ ಸಾಂಗ್‌ನಲ್ಲಿ ಕನ್ನಡದ ಬೆಡಗಿ ಸಹರ್ ಅಫ್ಸಾ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 4:00 IST
Last Updated 26 ಏಪ್ರಿಲ್ 2018, 4:00 IST
ಕುಚ್ ಇಸ್ ತರಹ್‌ನಲ್ಲಿ ಸಹರ್ ಅಫ್ಸಾ
ಕುಚ್ ಇಸ್ ತರಹ್‌ನಲ್ಲಿ ಸಹರ್ ಅಫ್ಸಾ   

ಬೆಂಗಳೂರು: ಕನ್ನಡದ ನಟಿ ಹಾಗೂ ರೂಪದರ್ಶಿ ಸಹರ್ ಅಫ್ಸಾ ಬಾಲಿವುಡ್‌ನ ಆಲ್ಬಮ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ರೂಪದರ್ಶಿಯಾಗಿರುವ ಸಹರ್ ಅಫ್ಸಾ ಈಗ ಬಾಲಿವುಡ್‌ನ ಖಳನಟ ಅಜಜ್ ಖಾನ್ ಜೊತೆ ಕುಚ್ ಇಸ್ ತರಹ್ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದೀಗ ತಾನೆ ಸ್ಯಾಂಡಲ್‌ವುಡ್‌ ಪ್ರವೇಶಿಸಿರುವ ಸಹರ್ ಅಫ್ಸಾ ಬೀಗ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ರೂಪದರ್ಶಿ‌ಯಾದ ಇವರಿಗೆ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಖುಷಿ ಕೊಟ್ಟಿದೆ‌ಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.