ADVERTISEMENT

ಹಿರಾನಿ ರಂಗಪ್ರೀತಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2015, 19:30 IST
Last Updated 24 ಮೇ 2015, 19:30 IST
ಹಿರಾನಿ ರಂಗಪ್ರೀತಿ
ಹಿರಾನಿ ರಂಗಪ್ರೀತಿ   

ವಿವಾದಗಳ ನಡುವೆಯೂ ‘ಪಿಕೆ’ ಚಿತ್ರದ ಮೂಲಕ ತಮ್ಮ ಯಶಸ್ಸಿನ ಯಾತ್ರೆಯನ್ನು ಮುಂದುವರಿಸಿದ್ದ ರಾಜಕುಮಾರ್‌ ಹಿರಾನಿ ಇದೀಗ ನಾಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದೂ ಅವರ ಸಹೋದರಿ ಅಂಜು ಕಿಶನ್‌ಚಾಂದನಿ ಅವರ ನಾಟಕ ಎನ್ನುವುದು ಇನ್ನೊಂದು ವಿಶೇಷ.

‘ಗ್ರೋಯಿಂಗ್‌ ಅಪ್‌’ ಎಂಬ ಹೆಸರಿನ ಈ ನಾಟಕವು ಹದಿಹರೆಯದವರ ಸಮಸ್ಯೆಗಳ ಕುರಿತಾದ ಕಥಾವಸ್ತುನ್ನು ಹೊಂದಿದೆ. ಅಂಜು ಈ ನಾಟಕವನ್ನು ಪ್ರೇಕ್ಷಕರೆದುರು ಪ್ರಸ್ತುತಪಡಿಸಲು ಕಾರತರಾಗಿದ್ದಾರೆ.

‘ಮೊದಲ ಸಲ ಅಂಜು ಅವರ ನಾಟಕದ ಕತಾ ಎಳೆಯನ್ನು ಕೇಳಿದಾಗಲೇ ನಾನು ಮಾರುಹೋದೆ. ಅವರ ಪರಿಕಲ್ಪನೆ ನನ್ನನ್ನು ಸಾಕಷ್ಟು ಪ್ರಭಾವಿತಗೊಳಿಸಿತು. ಅದೊಂದು ಅಪ್ಪಟ ಸೃಜನಶೀಲ ವ್ಯಕ್ತಿಯ ಪ್ರಯತ್ನ’ ಎಂದು ಹಿರಾನಿ ತಮ್ಮ ಸಹೋದರಿಯ ನಾಟಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಂಜು ಅವರ ಕತೆಯನ್ನು ಕೇಳಿ ಹಿರಾನಿ ಎಷ್ಟು ಪ್ರಭಾವಿತರಾದರೆಂದರೆ ತಕ್ಷಣವೇ ಅನ್ನು ನಾಟಕ ಇಲ್ಲವೇ ಸಿನಿಮಾ ಮಾಡು ಎಂದು ಕೇಳಿಕೊಂಡಿದ್ದಾರೆ.

ಬರಹಗಾರ್ತಿ ಮತ್ತು ಲೈಂಗಿಕ ಶಿಕ್ಷಣ ತಜ್ಞೆಯಾಗಿರುವ ಅಂಜು ಅವರ ಕಂಪೆನಿ ಬೇರೆ ಬೇರೆ ವಯೋಮಾನದವರಿಗೆ ಲೈಂಗಿಕ ಶಿಕ್ಷಣ ನೀಡುವುದರಲ್ಲಿ ತೊಡಗಿಸಿಕೊಂಡಿದೆ. ಈ ನಾಟಕದ ವಸ್ತುವೂ ಇಂಥದ್ದೇ ಒಂದು ಕಾರ್ಯಾಗಾರದಲ್ಲಿ ಹುಟ್ಟಿದ್ದಂತೆ.

ಈ ನಾಟಕವನ್ನು ಖ್ಯಾತ ರಂಗಭೂಮಿ ನಟ, ಬರಹಗಾರ ತ್ರಿಶಾ ಪಟೇಲ್‌ ನಿರ್ದೇಶಿಸಿದ್ದಾರೆ. ಮುಂಬೈನ ನಾರಿಮನ್‌ ಪಾಯಿಂಟ್‌ನಲ್ಲಿನ ಗೋದ್ರೇಜ್‌ ಡಾನ್ಸ್‌ ಥಿಯೇಟರ್‌ ನಲ್ಲಿ ಜೂನ್‌ 6 ಮತ್ತು 7ರಂದು ಈ ನಾಟಕ ಪ್ರದರ್ಶನ ಕಾಣುತ್ತಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.