ADVERTISEMENT

‘ಗರ್ಲ್‌ ರೈಸಿಂಗ್‌ ಇಂಡಿಯಾ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2015, 19:30 IST
Last Updated 22 ಫೆಬ್ರುವರಿ 2015, 19:30 IST
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ   

ಲಾಸ್‌ ಏಂಜಲೀಸ್‌ನಲ್ಲಿ ವ್ಯಾನಿಟಿ ಫೇರ್‌ ಮತ್ತು ಲಾರಿಯಲ್‌ ಪ್ಯಾರಿಸ್‌ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪ್ರಿ ಆಸ್ಕರ್‌ ಸಮಾರಂಭದಲ್ಲಿ ಬಾಲಿವುಡ್‌ನ ನಟಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಫ್ರೀಡಾ ಪಿಂಟೋ ‘ಗರ್ಲ್‌ ರೈಸಿಂಗ್‌ ಇಂಡಿಯಾ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಭಾರತ ದೇಶದ ಹೆಣ್ಣುಮಕ್ಕಳ ಜೀವನವನ್ನು ಬದಲಾಯಿಸುವ ಉದ್ದೇಶ ಈ ಅಭಿಯಾನದ್ದು.

‘ನಾನು ಆರಂಭದಿಂದಲೂ ಗರ್ಲ್ ರೈಸಿಂಗ್ ಅಭಿಯಾನದ ಭಾಗವಾಗಿದ್ದೇನೆ. ಇದರ ಮೂಲಕ ಭಾರತಕ್ಕೆ ಒಂದು ಉತ್ತಮ ಚಿಂತನೆ ದೊರಕಿರುವುದಕ್ಕೆ ಈ ಅಭಿಯಾನಕ್ಕೆ ನಾನು ಆಭಾರಿ. ಹೆಣ್ಣು ಮಕ್ಕಳಿಗೆ  ಶಿಕ್ಷಣ ನೀಡುವುದರಿಂದ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ’ ಎಂದು ಪ್ರಿಯಾಂಕಾ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

‘ಹೆಣ್ಣು ಮಕ್ಕಳನ್ನು ಏಕೆ ಶಿಕ್ಷಿತರನ್ನಾಗಿಸಬೇಕು? ಎಂದು ಕೇಳುವ ಬದಲು ಹೆಣ್ಣುಮಕ್ಕಳು ಏಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ? ಎಂದು ಪ್ರಶ್ನಿಸುವ ಸಮಯ ಬಂದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಜಗತ್ತು ಬದಲಾವಣೆ ಕಾಣುತ್ತದೆ ಎಂದಾದರೆ ತಡ ಯಾಕೆ? ಗರ್ಲ್ ರೈಸಿಂಗ್ ಅಭಿಯಾನದಿಂದ ಇದನ್ನು ಆರಂಭಿಸೋಣ’ ಎಂದು ಫ್ರೀಡಾ ಭರವಸೆಯ ಮಾತುಗಳನ್ನಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.