ADVERTISEMENT

‘ತಾರಾ ವರ್ಚಸ್ಸು ಕಳೆದುಕೊಳ್ಳುವ ಭಯವಿಲ್ಲ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ಕಳೆದ ವರ್ಷ ‘ಚೆನ್ನೈ ಎಕ್ಸ್‌ ಪ್ರೆಸ್‌’ ‘ಯೇ ಜವಾನಿ ಹೈ ದಿವಾನಿ’ ಮತ್ತು ‘ರೇಸ್‌ 2’ ನಂತಹ ಹಿಟ್‌ ಸಿನಿಮಾಗಳನ್ನು ನೀಡಿ ಸ್ಟಾರ್ ಪಟ್ಟದ ಮೆಟ್ಟಿಲೇರಿದ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್‌ನ ಅತಿ ಬೇಡಿಕೆಯಲ್ಲಿರುವ ನಟಿ.

ಮುಂದೆ ತಾರಾವರ್ಚಸ್ಸು ಕಳೆದುಕೊಳ್ಳುವ ಭಯ ಇಲ್ಲವೇ? ಎಂಬ ಪ್ರಶ್ನೆಗೆ ದೀಪಿಕಾ ನಗುನಗುತ್ತಲೇ ಉತ್ತರಿಸಿದ್ದಾರೆ.
‘ತಾರಾವರ್ಚಸ್ಸನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ನನ್ನನ್ನು ಯಾವತ್ತೂ ಕಾಡಿಲ್ಲ. ನಾನು ಬದುಕಿರುವವರೆಗೂ ನನಗೆ ತಾರಾವರ್ಚಸ್ಸು ಇರುತ್ತದೆ ಎಂಬುದು ನನಗೆ ಗೊತ್ತಿದೆ. ನಾನು ಇದುವರೆಗೂ ಚಿತ್ರರಂಗದಲ್ಲಿ ಮಾಡಿದ ಕೆಲಸದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ.

ಆದರೆ ಬದುಕಿನುದ್ದಕ್ಕೂ ಸ್ಟಾರ್‌ ಆಗಿಯೇ ಇರಬೇಕು ಎಂದು ನಾನು ಬಯಸುವುದಿಲ್ಲ. ಯಾಕೆಂದರೆ ವಾಸ್ತವಿಕವಾಗಿ ಅದು ಅಸಾಧ್ಯ. ಜೀವನದುದ್ದಕ್ಕೂ ತಾನು ಸ್ಟಾರ್‌ ಆಗಿಯೇ ಇರುತ್ತೇನೆಂದು ಯಾರಾದರೂ ಅಂದುಕೊಂಡಿದ್ದರೂ ಅದು ಅವರ ಭ್ರಮೆಯಷ್ಟೆ.’ ಎಂಬುದು ಅವರ ವಿವರಣೆ.

ಇತ್ತೀಚೆಗೆ ಬಿಡುಗಡೆಯಾದ ‘ಫೈಂಡಿಂಗ್‌ ಫ್ಯಾನಿ’ಯಲ್ಲಿನ ದೀಪಿಕಾ ನಟನೆಯ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆಯೂ ಈ ನೀಳಕಾಯದ ಬೆಡಗಿ ಮನಬಿಚ್ಚಿ ಮಾತನಾಡಿದ್ದಾರೆ. ‘ನನ್ನ ಪಾತ್ರ ನನಗೇ ಮೆಚ್ಚುಗೆಯಾಗುವುದು ಅಪರೂಪ. ನಮಗೆ ನಾವೇ ಕಟು ವಿಮರ್ಶಕರಾಗಿರಬೇಕು. ಅದರಿಂದ ಮುಂದೆ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಇನ್ನೂ ಉತ್ತಮ ಕೆಲಸ ಮಾಡಲು ಸಾಧ್ಯ ಎಂಬುದು ನನ್ನ ನಂಬಿಕೆ’ ಎಂದು ಆತ್ಮ ವಿಮರ್ಶೆಯ ಸೂತ್ರ ಮುಂದಿಡುತ್ತಾರೆ ದೀಪಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.