ADVERTISEMENT

‘ಪಿಕು’ ಪ್ರಚಾರಕ್ಕೆ ಅಮಿತಾಭ್ ಬಚ್ಚನ್‌ ಗೈರುಹಾಜರಿ

​ಪ್ರಜಾವಾಣಿ ವಾರ್ತೆ
Published 5 ಮೇ 2015, 19:30 IST
Last Updated 5 ಮೇ 2015, 19:30 IST
‘ಪಿಕು’ ಪ್ರಚಾರಕ್ಕೆ ಅಮಿತಾಭ್ ಬಚ್ಚನ್‌ ಗೈರುಹಾಜರಿ
‘ಪಿಕು’ ಪ್ರಚಾರಕ್ಕೆ ಅಮಿತಾಭ್ ಬಚ್ಚನ್‌ ಗೈರುಹಾಜರಿ   

ಬಿಗ್‌ ಬಿ ಅಮಿತಾಭ್ ಬಚ್ಚನ್‌ ಜ್ವರದಿಂದ  ಬಳಲುತ್ತಿದ್ದು,  ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಪಿಕು’ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.

ಈ ವಿಷಯವನ್ನು ಸ್ವತಃ ಅವರೇ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ‘ಸಂವಹನ ಎನ್ನುವುದು ಈಗ ತೃಪ್ತಿಯಾಗದ ಹಸಿವಿದ್ದಂತೆ... ನಮಗೆ ಹುಷಾರು ತಪ್ಪಿದೆ ಎಂದಮಾತ್ರಕ್ಕೆ ಸಂವಹನ ಮಾಡಬಾರದೇ? (Verified Incorporated Rationale Against Liberty– VIRAL) ಎಂದು 72 ವರ್ಷದ ಅಮಿತಾಭ್‌ ಟ್ವೀಟ್‌ ಮಾಡಿದ್ದಾರೆ.

ಶೂಜಿತ್‌ ಸಿರ್‌ಕಾರ್‌ ನಿರ್ದೇಶಿಸಿರುವ ‘ಪಿಕು’ ಸಿನಿಮಾದಲ್ಲಿ ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 8ರಂದು ಈ ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಇರ್ಫಾನ್‌ ಖಾನ್‌ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.