ADVERTISEMENT

‘ಸಂಜಯ್‌ ಸಿನಿಮಾ ಒಪ್ಪಿಕೊಂಡಿಲ್ಲ’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST
ವಿದ್ಯುತ್‌ ಜಮ್ವಾಲ್‌
ವಿದ್ಯುತ್‌ ಜಮ್ವಾಲ್‌   

ಸಂಜಯ್‌ ಘೋಷ್‌ ಅವರ ಮುಂದಿನ ಚಿತ್ರ ‘ದ ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌’ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ನಟ ವಿದ್ಯುತ್‌ ಜಮ್ವಾಲ್‌ ಸ್ಪಷ್ಟಪಡಿಸಿದ್ದಾರೆ. ಸಂಜಯ್‌ ಅವರ ಈ ಹೊಸ ಚಿತ್ರದಲ್ಲಿ ಸೈಫ್‌ ಅಲಿ ಖಾನ್‌ ಮತ್ತು ಕಂಗನಾ ರನೋಟ್‌ ನಟಿಸಲಿದ್ದಾರೆ.

‘‘ನಾನು ಸಂಜಯ್‌ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ ಅವರ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ‘ದ ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌’ ಒಳ್ಳೆಯ ಚಿತ್ರ. ಆದರೆ ಅದು ನನಗೆ ಹೊಂದುವ ಚಿತ್ರವಲ್ಲ. ಸಂಜಯ್‌ ಸೂಕ್ಷ್ಮ ಸಂವೇದನೆಯುಳ್ಳ ಅತ್ಯುತ್ತಮ ನಿರ್ದೇಶಕ. ಅವರೊಂದಿಗೆ ಭವಿಷ್ಯದಲ್ಲಿ ಕೆಲಸ ಮಾಡುವ ಆಸೆ ಇದೆ’’ ಎಂದು ಅವರು ಹೇಳಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.