ADVERTISEMENT

‘96’ ಸಿನಿಮಾ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 16:32 IST
Last Updated 28 ಮಾರ್ಚ್ 2017, 16:32 IST
ಶೀತಲ್‌ ಶೆಟ್ಟಿ
ಶೀತಲ್‌ ಶೆಟ್ಟಿ   

ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳೆಂದರೆ ಸಿನಿರಸಿಕರ ಕಿವಿ ನೆಟ್ಟಗಾಗುತ್ತದೆ. ಇಂತಹ ಸಿನಿಮಾಗಳಿಗೆ ಅಭಿಮಾನಿಗಳು ಹೆಚ್ಚು. ಈಗ ಈ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ ‘96’ ಚಿತ್ರ. ಶೀತಲ್‌ ಶೆಟ್ಟಿ ಅಭಿನಯದ ಸಸ್ಪೆನ್ಸ್‌ ಕಥೆಯಾಧಾರಿತ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಚಿತ್ರದ ಶೀರ್ಷಿಕೆಯೇ ಸಿನಿಮಾದಲ್ಲಿ ಹೊಸತನವಿರುವ ಸುಳಿವು ನೀಡುತ್ತಿದೆ. ರಾತ್ರಿ ಒಂಬತ್ತರಿಂದ ಬೆಳಿಗ್ಗೆ 6ರ ಒಳಗೆ ನಡೆಯುವ ಕಥೆಯ ಹೂರಣವೇ ಸಿನಿಮಾ.

ಉಳಿದವರು ಕಂಡಂತೆ ಮತ್ತು ಕೆಂಡಸಂಪಿಗೆ ಸಿನಿಮಾಗಳಂತೆ ಇಲ್ಲಿಯೂ ಶೀತಲ್‌ ಶೆಟ್ಟಿ ಪತ್ರಕರ್ತೆಯಾಗಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಹೆಸರು ಇಲ್ಲಿ ಬದಲಾಗಿಲ್ಲ.

ಒಂದು ಸಾವು, ಕೊಲೆಗಾರನನ್ನು ಪತ್ತೆ ಹಚ್ಚಲು ನಿರತರಾದ ಪೊಲೀಸರು, ಇನ್ನೊಂದೆಡೆ ಶೀತಲ್‌ ಶೆಟ್ಟಿಯ ಕೊಲೆಗೆ ಹೊಂಚುಹಾಕುತ್ತಿರುವ ರೌಡಿಗಳು. ಮತ್ತೊಂದೆಡೆ ಶೀತಲ್‌ ಕೈಯಲ್ಲಿ ಚಾಕು, ರಕ್ತ. ಟ್ರೇಲರ್‌ ನೋಡುವಾಗ ಕಥೆಯ ಸಾರಾಂಶ ತಿಳಿಯುವುದಿಲ್ಲ.

ಇಷ್ಟರವರೆಗೂ ಮಗುವಿಗೆ ಲಾಲಿ ಹೇಳಲು ಹಾಡುತ್ತಿದ್ದ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...’ ಹಾಡನ್ನು ಇಲ್ಲಿ ವಿಭಿನ್ನವಾಗಿ ಬಳಸಲಾಗಿದೆ.

ಇಲ್ಲಿಯವರೆಗೆ 40 ಸಾವಿರ ಮಂದಿ ಟ್ರೇಲರ್‌ ವೀಕ್ಷಿಸಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಹಲವು ಮಂದಿ ಕಮೆಂಟ್‌ ಮಾಡಿದ್ದು, ಚಿತ್ರದಲ್ಲಿನ ಲೈಟಿಂಗ್‌, ಸಂಗೀತದ ಕಥೆಯ ಹೊಸತನವಿರುವಂತೆ ಕಾಣುತ್ತಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ರೇಲರ್‌ ನೋಡಲು: http://bit.ly/2n923SW 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.