ಕುವೆಂಪು ಅವರು ‘ವಿಶ್ವಮಾನವ’ ಕವಿತೆಯಲ್ಲಿ, ನಿರ್ದಿಗಂತವಾಗಿ ಏರುತ್ತಾ ಅನಿಕೇತನವಾಗುವ ಚೇತನದ ಸಾಧ್ಯತೆಯ ಕಡೆಗೆ ವಿಶಿಷ್ಟವಾಗಿ ಗಮನ ಸೆಳೆದವರು. ಆ ಮಹಾಕವಿಯನ್ನು ಎದೆಯಾಳಕ್ಕಿಳಿಸಿಕೊಂಡು ನಟ ಪ್ರಕಾಶ್ ರೈ ರಂಗಭೂಮಿಗೆ ವಾಪಸು ಬಂದಿದ್ದಾರೆ. ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿಯ ಲೋಕಪಾವನಿ ನದಿಯಂಚಿನಲ್ಲಿ ತೋಟ ಮಾಡಿ, ‘ನಿರ್ದಿಗಂತ’ ಎಂಬ ‘ಇನ್‌ಕ್ಯುಬೇಟರ್ ಥಿಯೇಟರ್’ ಅಥವಾ ರಂಗಭೂಮಿಯ ಕಾವುಗೂಡನ್ನು ಕಟ್ಟುತ್ತಿದ್ದಾರೆ. ಅಲ್ಲಿ ಕನಿಷ್ಠ ಮೂವತ್ತು ಜನ ನೆಲೆಸಿ ರಂಗ ತಾಲೀಮು ನಡೆಸಲು ಬೇಕಾದ ಎಲ್ಲ ಸೌಕರ್ಯಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.