ADVERTISEMENT

ಪ್ರೇಮಿಯ ಹುಡುಕಾಟ

ಚಿತ್ರ: ಊಟಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

* ಚಿತ್ರ: ಊಟಿ
* ನಿರ್ಮಾಪಕ: ಎಚ್. ಮೋಹನ್ ಕುಮಾರ್
* ನಿರ್ದೇಶಕ: ಮಹೇಶ ಕುಮಾರ್
* ತಾರಾಗಣ: ಅವಿನಾಶ್, ನೈನಾ, ಗುರುಪ್ರಸಾದ್, ಬಿ.ಎಂ.ಗಿರಿರಾಜ್

ವಿಜ್ಞಾನಿಯಾಗಿ ವಿದೇಶದಲ್ಲಿ ನೆಲೆಸಿದ್ದ ಕುಮಾರ್ ದೇಶಕ್ಕೆ ಮರಳುವ ವೇಳೆಗೆ ಅಮ್ಮನಿಗೆ ಆರೋಗ್ಯ ಸರಿಯಿಲ್ಲ. ಮಗನ ಮದುವೆ ನೋಡುವುದು ಆಕೆಯ ಅಂತಿಮ ಆಸೆ. ಮನೆಯವರೆಲ್ಲ ಕುಮಾರ್‌ಗೆ ಹುಡುಗಿ ಹುಡುಕಲು ತುದಿಗಾಲಲ್ಲಿದ್ದಾರೆ. ಆದರೆ, ಅದೆಲ್ಲ ಬೇಡ, ನಾನೇ ಹೇಳುತ್ತೇನೆ ಎಂದ ಕುಮಾರ್ ತನ್ನ ಸ್ನೇಹಿತನ ಜೊತೆ ಊಟಿಗೆ ಹೊರಡುತ್ತಾನೆ.

ಕುಮಾರ್ ಊಟಿಗೆ ಹೊರಟಿದ್ದು ತನ್ನ ಪ್ರೇಯಸಿಯನ್ನು ಹುಡುಕಿಕೊಂಡು. ಹನ್ನೆರಡು ವರ್ಷಗಳ ಹಿಂದೆ ಊಟಿಯಲ್ಲಿದ್ದಾಗ ಪಕ್ಕದ ಮನೆಯಲ್ಲೇ ಇದ್ದ ಮಲೆಯಾಳಿ ಹುಡುಗಿ ಜೆನ್ನಿಫರ್ ಜೊತೆ ಕುಮಾರ್‌ಗೆ ಪ್ರೀತಿಯಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡು ಎಂದು ಆತನನ್ನು ಜೆನ್ನಿಫರ್ ಪ್ರೋತ್ಸಾಹಿಸುತ್ತಾಳೆ. ಇದೇ ಸಂದರ್ಭದಲ್ಲಿ ಕಾವೇರಿ ಗಲಾಟೆ ತೀವ್ರವಾಗಿ ಊಟಿಯಲ್ಲಿದ್ದ ಕನ್ನಡಿಗರು ಕರ್ನಾಟಕಕ್ಕೆ ಬಂದುಬಿಡುತ್ತಾರೆ. ಜೆನ್ನಿಫರ್‌ಗೆ ಕೊನೆಯ ಮಾತೂ ಹೇಳಲಾಗದೇ ಕುಮಾರ್ ಅಲ್ಲಿಂದ ಹೊರಡಬೇಕಾಗುತ್ತದೆ. ಕುಮಾರ್‌ಗೆ ಆತನ ಮನದರಸಿ ಸಿಗುತ್ತಾಳಾ ಎನ್ನುವುದು ಕಥೆಯಲ್ಲಿನ ಕೌತುಕದ ಅಂಶ.

ಕೃಷ್ಣಮೂರ್ತಿ ಚಮರಂ ಅವರ ‘ಪ್ರೀತಿಯ ಅರಸಿ’ ಕಾದಂಬರಿಯನ್ನು ಮಹೇಶ ಕುಮಾರ್ ನಿರ್ದೇಶಿಸಿದ್ದಾರೆ. ಎಂ. ಸೆಲ್ವಂ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನ, ರಾಜ್‌ಭಾಸ್ಕರ್ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT