ADVERTISEMENT

ಗಿಡಬಸಳೆಯ ವಿಶೇಷ

ನಮ್ಮೂರ ಊಟ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST
ಗಿಡ ಬಸಳೆ ಸೊಪ್ಪಿನ ಬೋಂಡ
ಗಿಡ ಬಸಳೆ ಸೊಪ್ಪಿನ ಬೋಂಡ   

ಗಿಡಬಸಳೆಯನ್ನು ಮನೆಯಂಗಳದಲ್ಲಿ, ಹಿತ್ತಲಲ್ಲಿ ಹಾಗೂ ಮಣ್ಣಿನ ಪಾಟ್‌ಗಳಲ್ಲೂ ಬೆಳೆಯಬಹುದು. ಗಿಡಬಸಳೆಯಿಂದ ಅನೇಕ ಅಡುಗೆ ಪದಾರ್ಥಗಳನ್ನು ಮಾಡಬಹುದು. ಇದರಲ್ಲಿ ರುಚಿಯಾದ ಬೋಂಡ , ಪಲ್ಯ, ಸಾಸಿವೆ, ಸಾಂಬಾರು ಹಾಗೂ ಗಿಡಬಸಳೆ ಸೊಪ್ಪಿನ ಚಿತ್ರಾನ್ನವನ್ನು ಮಾಡುವ ವಿಧಾನವನ್ನು ನೇತ್ರಾ ಗಣಪತಿ ವಿವರಿಸಿದ್ದಾರೆ.

***
ಗಿಡ ಬಸಳೆ ಸೊಪ್ಪಿನ ಬೋಂಡ
ಸಾಮಗ್ರಿ:
ಸಣ್ಣಗೆ ಹೆಚ್ಚಿದ ಗಿಡಬಸಳೆ ಸೊಪ್ಪು 2 ಕಟ್ಟು, ಕಡ್ಲೆ ಹಿಟ್ಟು ಒಂದು ಕಪ್ಪು , ಸ್ವಲ್ಪ ಮೈದಾ ಹಿಟ್ಟು, ಸಣ್ಣಗೆ ಹೆಚ್ಚಿದ ಹಸಿಮೆಣಸು 4-6, 1 ಚಮಚ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, 1 ಚಮಚ ಜೀರಿಗೆ, 1 ಚಮಚ ಕೊತ್ತಂಬರಿ, ಚಿಟಿಕೆ ಇಂಗು, ಕರಿಯಲು ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ. 

ವಿಧಾನ: ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಬಿಟ್ಟು ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಹಾಗೂ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಬೋಂಡದ ಹದದಲ್ಲಿ ಹಿಟ್ಟನ್ನು ಕಲಸಿಕೊಳ್ಳಬೇಕು, ಕಲಸಿದ ನಂತರ ಉಂಡೆಗಳನ್ನು ಮಾಡಿ ಕರಿದರೆ ರುಚಿಕರ ಬೋಂಡ ಸಿದ್ಧವಾಗುತ್ತದೆ.

***
ಗಿಡಬಸಳೆ ಪಲ್ಯ
ಸಾಮಗ್ರಿ:
ಎರಡು ಕಟ್ಟು ಬಸಳೆ ಸೊಪ್ಪು. ಅರ್ಧ ಕಾಯಿ ತುರಿ, ಒಗ್ಗರಣೆಗೆ ಎಣ್ಣೆ, ಹೆಚ್ಚಿದ ಹಸಿಮೆಣಸು 6-8, ಸಾಸಿವೆ, ಉದ್ದಿನಬೇಳೆ. ಅರಿಸಿನ, ಉಪ್ಪು, ಒಂದು ಚಮಚ ಬೆಲ್ಲ, ಸ್ವಲ್ಪ ಲಿಂಬು ರಸ,

ವಿಧಾನ: ಒಗ್ಗರಣೆಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ನಂತರ ಹೆಚ್ಚಿದ ಸೊಪ್ಪನ್ನು ಹಾಕಿ. ಅದಕ್ಕೆ ಬೆಲ್ಲ ಹುಳಿ ಉಪ್ಪು ಹಾಕಿ ಬೆಂದ ನಂತರ ಕಾಯಿತುರಿ ಹಾಕಬೇಕು. ಆಗ ರುಚಿಯಾದ ಪಲ್ಯ ರೆಡಿಯಾಗುತ್ತೆ.

ಚಿತ್ರಾನ್ನ
ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಉಪಯೋಗಿಸಿ ಪಲ್ಯ ತಯಾರಿಸಿ ಇಟ್ಟುಕೊಂಡು ಉದುಉದುರಾಗಿ ಅನ್ನವನ್ನು ಮಾಡಿಕೊಂಡು ಅನ್ನಕ್ಕೆ ಪಲ್ಯವನ್ನು ಹಾಕಿ ಕಲಸಬೇಕು. ಅನ್ನ ಮತ್ತು ಪಲ್ಯ ಮಿಶ್ರಣದ ಚಿತ್ರಾನ್ನ ತಿನ್ನಲು ತುಂಬ ರುಚಿಕರವಾಗಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.