ADVERTISEMENT

ನೋಡಿರಿಲ್ಲಿ... ಬಿಯರಿನ ನಲ್ಲಿ

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST
ನೋಡಿರಿಲ್ಲಿ... ಬಿಯರಿನ ನಲ್ಲಿ
ನೋಡಿರಿಲ್ಲಿ... ಬಿಯರಿನ ನಲ್ಲಿ   

‘ಬೆಂಗಳೂರಿಗೆ ಪಬ್‌ ಸಿಟಿ ಎಂಬ ಅನ್ವರ್ಥವಿದೆ. ಅದರಲ್ಲೂ ಸೆಂಟ್ರಲ್‌ ಬೆಂಗಳೂರು, ಬ್ರಿಗೇಡ್‌ ರಸ್ತೆಯಲ್ಲಿ ಸಿಕ್ಕಾಪಟ್ಟೆ ಪಬ್‌ಗಳಿವೆ. ಈ ಪಬ್‌ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಟ್ಯಾಪ್‌ ವಾಟರ್‌ ಆರಂಭಿಸಿದ್ದೇವೆ. ಇದೊಂದು ಬಿಯರ್‌ ಡ್ರಿಂಕಿಂಗ್‌ ಜಾಯಿಂಟ್‌. ನಮಗೆ ಜಾಗದ ಸಮಸ್ಯೆ ಎದುರಾಗಿದ್ದರಿಂದ ಮೈಕ್ರೋಬ್ರೂವರಿ ಮಾಡಲಿಲ್ಲ.

ಅದರ ಬದಲಾಗಿ ಪಬ್‌ಗೆ ಬರುವ ಗ್ರಾಹಕರಿಗೆ ನಾವು 8ರಿಂದ 10 ಟ್ಯಾಪ್‌ಗಳಲ್ಲಿ ಇಂಟರ್‌ನ್ಯಾಷನಲ್‌ ಡ್ರಾಫ್ಟ್‌ ಬಿಯರನ್ನು

ಒದಗಿಸುತ್ತೇವೆ’ ಎಂದರು ಪಬ್‌ನ ಮಾಲೀಕರಾದ ಮಹೇಶ್‌ ರಾಜು. ‘ಟ್ಯಾಪ್ ವಾಟರ್‌ನಲ್ಲಿ ವಿಭಿನ್ನ ಬಿಯರ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದ್ದೇವೆ. ಬೇರೆ ರಾಜ್ಯಗಳಿಂದ ಇಲ್ಲಿಗೆ ಬಿಯರ್‌ ತರಲಿಕ್ಕೆ ಆಗುವುದಿಲ್ಲ. ಹಾಗಾಗಿ, ಸದ್ಯಕ್ಕೆ ನಾವು ಫಾಸ್ಟರ್ಸ್‌, ಕಿಂಗ್‌ಫಿಷರ್‌ ಸ್ಟ್ರಾಂಗ್‌, ನಾಕೌಟ್‌ ಹೀಗೆ ಐದಾರು ವೆರೈಟಿ ಬಿಯರ್‌ಗಳನ್ನು ಪರಿಚಯಿಸಿದ್ದೇವೆ’ ಎನ್ನುತ್ತಾ ಟ್ಯಾಪ್ ವಾಟರ್ ಕಾನ್ಸೆಪ್ಟ್‌ ಬಗ್ಗೆ ಹೇಳತೊಡಗಿದರು ಇಲ್ಲಿನ ಡೈರೆಕ್ಟರ್–ಆಪರೇಷನ್ಸ್‌ನ ನಿರ್ಮಲ್‌ ಕುಮಾರ್‌ ಬಿ.

‘ಬೇರೆ ಪಬ್‌ಗಳಲ್ಲೆಲ್ಲಾ ಒಂದೇ ಟ್ಯಾಪ್‌ ಇರುತ್ತದೆ. ಆದರೆ, ನಮ್ಮಲ್ಲಿ ಎಂಟು ಟ್ಯಾಪ್‌ಗಳಿವೆ. ಈ ಮೂಲಕ ಎಲ್ಲ ಕಂಪೆನಿಗಳಿಗೂ ಒಂದು ಪ್ಲಾಟ್‌ಫಾರ್ಮ್‌ ಒದಗಿಸಿದ್ದೇವೆ. ಗ್ರಾಹಕರು ತಮಗೆ ಇಷ್ಟವಾದ ಬ್ರಾಂಡ್‌ನ ಬಿಯರನ್ನು ಇಲ್ಲಿ ಸವಿಯಬಹುದು. ಬೆಂಗಳೂರಿನಲ್ಲಿ ಎರಡೋ ಮೂರೋ ಗ್ಯಾಸ್ಟ್ರೋ ಪಬ್‌ಗಳು ಇವೆ. ಬಾಣಸಿಗ ವೃತ್ತಿಯಲ್ಲಿ ನನಗೆ 15 ವರ್ಷಗಳ ಅನುಭವವಿದೆ. ಆ ಅನುಭವವನ್ನೆಲ್ಲಾ ಇಲ್ಲಿ ಧಾರೆ ಎರೆದಿದ್ದೇನೆ. ಗ್ಯಾಸ್ಟ್ರೋನಮಿ ಅಂದರೆ ಆಹಾರ.

ನೀವು ಇಲ್ಲಿನ ಯಾವುದೇ ಖಾದ್ಯ ಸವಿದರೂ ಅದು ಫೈನ್‌ಡೈನ್‌ ರೆಸ್ಟೋರೆಂಟ್‌ಗಿಂತಲೂ ಚೆನ್ನಾಗಿರುತ್ತದೆ. ಪಬ್‌ ಫುಡ್‌ ಅಂದರೆ ಚಿಲ್ಲಿಚಿಕನ್‌, ಗೋಬಿ ಮಂಚೂರಿಯನ್‌ ಎಂಬ ಭಾವನೆ ಜನರಲ್ಲಿ ಇದೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ಬಿಯರ್ ಜೊತೆಗೆ ಆಹಾರವೂ ಚೆನ್ನಾಗಿದೆ. ಟ್ಯಾಪ್‌ ವಾಟರ್‌ ಅನ್ನು ಮುಂದಿನ ದಿನಗಳಲ್ಲಿ ಡೆಸ್ಟಿನೇಷನ್‌ ಜಾಯಿಂಟ್‌ ಮಾಡಬೇಕೆಂಬ ಆಸೆ ಇದೆ. ಕೊೋಷಿಷ್ ರೀತಿಯಲ್ಲಿ ಲಾಂಗ್‌ಲೀವ್‌ ಪ್ಲೇಸ್‌ ಆಗಬೇಕು. ಹತ್ತು ವರ್ಷ ಬಿಟ್ಟು ಬಂದರೂ ಈ ಜಾಗದಲ್ಲಿ ಟ್ಯಾಪ್‌ ವಾಟರ್‌ ಇತ್ತು ಎಂಬುದನ್ನು ಗ್ರಾಹಕರು ನೆನೆಯಬೇಕು. 

ಟ್ಯಾಪ್‌ ವಾಟರ್‌ ಶುರುವಾಗಿ ಮೂರು ತಿಂಗಳಾಗಿದೆ. ನಮ್ಮ ಕಾನ್ಸೆಪ್ಟ್‌ ಪ್ರಕಾರ ಪಬ್‌ನಲ್ಲಿ ಮೂರು ಟ್ಯಾಪ್‌ಗಳನ್ನು ಅಳವಡಿಸಿದ್ದೇವೆ. ಬಿಯರ್‌ ಜಾಯಿಂಟ್‌ ಇರುವುದರಿಂದ ನಾವು ಟೇಬಲ್‌ ಓರಿಯೆಂಟ್‌ ಟ್ಯಾಪ್ಸ್‌ ಮಾಡಿದ್ದೇವೆ. ಇದು ಸಹ ಹೊಸ ಪರಿಕಲ್ಪನೆ. ಗ್ರಾಹಕರು ಆಯ್ಕೆ ಮಾಡುವ ಬಿಯರ್‌ ಪ್ರಕಾರ ನಾವು ಚಾರ್ಜ್‌ ಮಾಡುತ್ತೇವೆ. ಈಗ ನಾವು ಒಬ್ಬರಿಗೆ ₨400 (ತೆರಿಗೆ ಸೇರಿ) ಜಾರ್ಜ್‌ ಮಾಡಿ ಅವರಿಗೆ 90 ನಿಮಿಷ ಸಮಯ ಕೊಡುತ್ತೇವೆ. ಈ ಸಮಯದಲ್ಲಿ ಗ್ರಾಹಕರು ಎಷ್ಟು ಬೇಕಾದರೂ ಬಿಯರ್‌ ಹೀರಬಹುದು.

ಹತ್ತು ಜನ ಬಿಯರ್‌ ಪ್ರಿಯರು ಬಂದರೆಂದರೆ ಅವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಿಯರ್‌ ಇಷ್ಟವಾಗುತ್ತದೆ. ಅವರಲ್ಲೆ ಕೆಲವರು ‘ನೀನೆಷ್ಟು ಕುಡಿಯುತ್ತೀಯಾ, ನಾನು ಅದಕ್ಕಿಂತ ಜಾಸ್ತಿ ಕುಡಿಯುತ್ತೇನೆ’ ಎಂದು ಚಾಲೆಂಜ್‌ ಮಾಡಿಕೊಳ್ಳುತ್ತಾರೆ. ಸೋ, ನಿಮ್ಮ ಹತ್ತಿರ ಟ್ಯಾಪ್‌ ಇರುತ್ತದೆ. ಗ್ಲಾಸ್‌ ಬರುತ್ತೇ, ನೀವು ಫಾಸ್ಟ್‌ ಆಗಿ ಕುಡಿಯುತ್ತೀರೋ, ಸ್ಲೋ ಆಗಿ ಕುಡಿಯುತ್ತೀರೋ ಅದು ನಿಮಗೆ ಬಿಟ್ಟಿದ್ದು. 90 ನಿಮಿಷದಲ್ಲಿ ಎಷ್ಟು ಬೇಕಾದರೂ ಕುಡಿಯಬಹುದು.

ಈ ಬಗೆಯ ಕಾನ್ಸೆಪ್ಟ್‌ ಮತ್ತು ಫ್ರೀ ಫ್ಲೋ ಆಫ್‌ ಬಿಯರ್‌ ನಮ್ಮದೇ ಯೋಜನೆ. ಈವರೆಗೂ ಇದನ್ನು ಯಾರೂ ಮಾಡಿಲ್ಲ. ಟ್ಯಾಪ್‌ನಲ್ಲಿ ಸ್ವೈಪ್‌ ಕಾರ್ಡ್‌ ಹಾಕುವುದಾಗಲೀ, ಎಷ್ಟು ಕುಡಿಯುತ್ತಿದ್ದೇವೆ ಎಂದು ತೋರುವ ಮೀಟರ್‌ ಆಗಲೀ ಏನಿಲ್ಲ, ಅಲ್ಲಿ ಒಂದು ಟೈಮ್‌ರ್‌ ಮಾತ್ರ ಇರುತ್ತದೆ.  ಗ್ಯಾಸ್ಟ್ರೋನಮಿಯಂತೆ ನಮ್ಮ ಪಬ್‌ನ ಪ್ರತಿ ಖಾದ್ಯವೂ ಕ್ರಿಯೇಟಿವ್‌ ಆಗಿ ಥಿಂಕ್‌ ಮಾಡಿ ಪರಿಚಯಿಸಲಾಗಿದೆ. ನನ್ನ ವೃತ್ತಿಯಾನ ಹೇಗಿತ್ತೋ ಆ ಮಾದರಿಯಲ್ಲಿ ಇಲ್ಲಿನ ಮೆನು ರೂಪಿಸಿದ್ದೇನೆ.

ಇಲ್ಲಿನ ಪ್ರತಿ ಖಾದ್ಯವು ಭಿನ್ನವಾಗಿದೆ. ಬ್ರಿಗೇಡ್‌ ರಸ್ತೆಯಲ್ಲಿ ಇಂಡಿಯಾನ ಬರ್ಗರ್‌ ಎಂಬ ಜನಪ್ರಿಯ ಬರ್ಗರ್‌ ಸೆಂಟರ್‌ ಇತ್ತು. ಅದು ಸೆಂಟ್‌ ಪ್ಯಾಟ್ರಿಕ್ಸ್‌ ಸ್ಕೂಲ್‌ ಕಾಂಪ್ಲೆಕ್ಸ್‌ನಲ್ಲಿತ್ತು. ಹಾಗಾಗಿ, ಅದರ ನೆನಪಿಗಾಗಿ, ಎಸ್‌ಪಿಎಸ್‌ ಬರ್ಗರ್‌ ಪರಿಚಯಿಸಿದ್ದೇವೆ. ನಮ್ಮಲ್ಲಿಗೆ ಗ್ರಾಹಕರು ಬರೀ ಬಿಯರ್‌ ಹೀರಲಷ್ಟೇ ಬರುವುದಿಲ್ಲ. ಇಲ್ಲಿ ಸಿಗುವ ರುಚಿಯಾದ ಖಾದ್ಯಗಳನ್ನು ಇಷ್ಟಪಟ್ಟು ಸವಿಯಲು ಬರುತ್ತಾರೆ’.
ಸ್ಥಳ: ಟ್ಯಾಪ್‌ವಾಟರ್‌, ಫೀಪ್ತ್ ಅವೆನ್ಯೂ ಮಾಲ್‌ ಎದುರು, ಬ್ರಿಗೇಡ್‌ ರಸ್ತೆ. ಟೇಬಲ್‌ ಕಾಯ್ದಿರಿಸಲು: 080 4965 2861.  

ಮಿಸ್‌ಮಾಡದೇ ತಿನ್ನಬೇಕಾದದ್ದು... 
ಟ್ಯಾಪ್ ವಾಟರ್‌ನಲ್ಲಿ ಮಿಸ್‌ ಮಾಡದೇ ತಿನ್ನಬೇಕಾದದ್ದು ಲ್ಯಾಂಬ್‌ ಚಾಪ್ಸ್‌ ಮತ್ತು ಎಸ್‌ಪಿಎಸ್‌ ಬರ್ಗರ್‌. ಇದು ಬಿಯರ್‌ಗೆ ಒಳ್ಳೆ ಪೇರ್‌. ಅಂದಹಾಗೆ, ಇಲ್ಲಿ ಸಿಗುವ ಎಲ್ಲ ಖಾದ್ಯವೂ ಬಿಯರ್‌ಗೆ ಉತ್ತಮ ಸಂಗಾತಿ. ಹುಳಿ ಅಥವಾ ಚೀಸ್‌ ಜಾಸ್ತಿ ಇರುವ ಖಾದ್ಯಗಳು ಸಖತ್ ಕಾಂಬಿನೇಷನ್‌. ಇದು ಬಿಯರ್‌ ಡ್ರಿಂಕಿಂಗ್‌ ಜಾಯಿಂಟ್‌ ಆಗಿರುವುದರಿಂದ ಎಲ್ಲ ಫುಡ್‌ನ್ನು ಅದೇ ರೀತಿ ಬ್ಯಾಲೆನ್ಸ್‌ ಮಾಡಲಾಗಿದೆ. ಇಲ್ಲಿನ ಬೆಂಗಳೂರು ಬಿಯರ್‌ ಕಂಪ್ಯಾನಿಯನ್‌ನಲ್ಲಿ (ಬಿಬಿಸಿ) ವೆರೈಟಿ ಚೀಸ್‌ ಖಾದ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT