ADVERTISEMENT

‘48 ಈಸ್ಟ್ ’ ನಲ್ಲಿ ನಲವತ್ತೆಂಟು ದೇಶಗಳ ರುಚಿ

ರಸಾಸ್ವಾದ

ಹೇಮಾ ವೆಂಕಟ್
Published 29 ಡಿಸೆಂಬರ್ 2016, 19:30 IST
Last Updated 29 ಡಿಸೆಂಬರ್ 2016, 19:30 IST
ವೆಜ್‌ ಮೊಮೊ
ವೆಜ್‌ ಮೊಮೊ   
ನೆ ಊಟ ಬೇಜಾರಾಗಿದೆ. ಹೊಸದೇನೋ ತಿನ್ನಬೇಕು ಎಂದು ಮನಸು ಹಾತೊರೆಯುತ್ತದೆ.  ಕಚೇರಿಯಲ್ಲಿ ಗೆಳೆಯರ ಜೊತೆ ಚಿಕ್ಕದೊಂದು ಪಾರ್ಟಿ ಮಾಡಬೇಕು. ಹೊರಗೆ ಹೋಗಲು ಸಮಯವಿಲ್ಲ. ಇರುವಲ್ಲಿಗೇ ತರಿಸುವುದಿದ್ದರೆ ಏನೇನು ತರಿಸಬೇಕು, ಎಲ್ಲಿಂದ ತರಿಸೋದು ಎಂಬ ಚರ್ಚೆ ನಡೆಯುತ್ತಿರುತ್ತದೆ.  
 
ನಿಮ್ಮ ಮನೆ, ಕಚೇರಿ ಇಂದಿರಾನಗರದಲ್ಲಿದ್ದರೆ, ನಿಮಗೆ ಒಂದಲ್ಲ ನಲವತ್ತೆಂಟು ದೇಶಗಳ ಹೊಸ ರುಚಿ ಸವಿಯುವ ಅವಕಾಶದ ಬಾಗಿಲು ತೆರೆದಿದೆ. 
 
‘48 ಈಸ್ಟ್‌’ ಆನ್‌ಲೈನ್‌ ರೆಸ್ಟೋರೆಂಟ್‌  ಏಷ್ಯಾದ 48  ದೇಶಗಳ ರುಚಿಯನ್ನು ನೀವಿರುವ ಜಾಗಕ್ಕೇ  ಪೂರೈಸಲಿದೆ. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇವಲ 45 ನಿಮಿಷದೊಳಗೆ. ಮೊಬೈಲ್‌ ಪ್ಲೇಸ್ಟೋರ್‌ನಲ್ಲಿ 48east ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆರ್ಡರ್‌  ಸಲ್ಲಿಸಬಹುದು. www.fortyeighteast.com ನಲ್ಲೂ ಆರ್ಡರ್‌ ಮಾಡಬಹುದು.
 
ಪ್ರತಿ ದೇಶದ ಆಹಾರ ವೈವಿಧ್ಯವನ್ನು ಭಾರತೀಯರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಚೈನೀಸ್‌ ಶೈಲಿಯ ನೂಡಲ್ಸ್‌, ದಕ್ಷಿಣ ಭಾರತದ ಫ್ರೈಡ್‌ರೈಸ್, ಮಲೇಷಿಯಾದ ಮದುವೆ ವಿಶೇಷ ಚಿಕನ್‌ ಬಿರಿಯಾನಿ, ಸಿಂಗಪುರದ ಮೀ ಗೊರೆಂಗ್‌ ಚಿಕನ್‌, ಕೊರಿಯನ್‌ ವಿಶೇಷ ರೈಸ್‌ಬೌಲ್‌, ಹೆಲ್ಸ್‌ ಚಿಕನ್‌ ಹೀಗೆ ವಿವಿಧ ಭಾಗದ ವಿಶೇಷ  ತಿನಿಸುಗಳು ಈ ರೆಸ್ಟೋರೆಂಟ್‌ನ   ಮೆನುವಿನಲ್ಲಿ ಸೇರಿವೆ. ಪ್ರತಿ ವಾರ ಬೇರೆ ಮೆನುವಿನಲ್ಲಿ ಬದಲಾವಣೆ ಮಾಡಲಾಗುತ್ತದೆ.
 
ಕಳೆದ ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡಿರುವ 48 ಈಸ್ಟ್‌  ಇಂದಿರಾನಗರದ ಸುತ್ತಮುತ್ತಲಿನ ಪ್ರದೇಶಗಳಾದ ದೊಮ್ಮಲೂರು, ಹಲಸೂರು, ಹಳೆ ವಿಮಾನ ನಿಲ್ದಾಣ ರಸ್ತೆ, ಎಚ್‌ಎಎಲ್‌ 2 ಮತ್ತು 3ನೇ ಹಂತ, ತಿಪ್ಪಸಂದ್ರ, ಕೇಂಬ್ರಿಡ್ಜ್‌ ಬಡಾವಣೆಗಳಿಗೆ  ಆಹಾರ ಪೂರೈಸುತ್ತಿದೆ. 
 
ಸಸ್ಯಾಹಾರ, ಮಾಂಸಾಹಾರ ಎರಡೂ ಬಗೆಯ ಖಾದ್ಯಗಳು ಲಭ್ಯವಿದೆ. ಹೋಟೆಲಿನಲ್ಲಿ ನೀಡುವ ರೀತಿಯಲ್ಲಿಯೇ  ಪಾರ್ಸೆಲ್‌ ಪೊಟ್ಟಣಗಳಲ್ಲಿಯೂ ಆಕರ್ಷಕವಾಗಿ ಆಹಾರವನ್ನು ವಿನ್ಯಾಸ ಮಾಡಿರುತ್ತಾರೆ.   
 
ಆರ್ಡರ್‌ ಮಾಡಿದ ಆಹಾರ 45 ನಿಮಿಷದ ಒಳಗೆ  ತಲುಪಿಸುವ ಉದ್ದೇಶದಿಂದ ಸದ್ಯ ನಿಗದಿತ ಸಮಯದಲ್ಲಿ  ತಲುಪಿಸಲು ಸಾಧ್ಯವಾಗುವ ಪ್ರದೇಶಗಳಿಂದ ಮಾತ್ರ ಆರ್ಡರ್‌ ಪಡೆಯಲಾಗುತ್ತದೆ ಎಂದು ಸಂಸ್ಥಾಪಕ ಜೋಸೆಫ್‌ ಹೇಳುತ್ತಾರೆ. 
 
‘ಸಿದ್ಧಪಡಿಸಿದ ಆಹಾರವನ್ನು ಒಂದು ಗಂಟೆಯ ಒಳಗಾಗಿ ರುಚಿ ನೋಡುವಂತಿರಬೇಕು ಎಂಬುದು ಆಹಾರ ಕ್ಷೇತ್ರದ ಅನುಭವದಿಂದ  ಕಂಡುಕೊಂಡ ಸತ್ಯ’ ಎನ್ನುತ್ತಾರೆ ಅವರು.
 
ಬೆಲೆ ಕಡಿಮೆ 
‘48 ಈಸ್ಟ್‌’ನ ಖಾದ್ಯಗಳ ಬೆಲೆ ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಬುಕಾರಿ ಮಲೇಷಿಯನ್‌ ಚಿಕನ್‌ ಬಿರಿಯಾನಿ ಬೆಲೆ ₹220, ಮಸ್ಸಮನ್‌ ನೂಡಲ್‌ ಸೂಪ್‌ ಬೆಲೆ ₹200, ಹೆಲ್ಸ್‌ ಚಿಕನ್‌ ₹175, ಕೊರಿಯನ್‌ ವೆಜ್‌ ರೈಸ್‌ ಬೌಲ್‌ ₹185, ಮಿ ಗೊರೆಂಗ್‌ ಚಿಕನ್‌(ನೂಡಲ್ಸ್‌) ಬೆಲೆ  ₹220. 
 
ಅನುಭವಿ ಉದ್ಯಮಿ
ಜೋಸೆಫ್‌ ಚೆರಿಯನ್‌  ಕೇರಳ ಮೂಲದವರಾದರೂ ಬೆಂಗಳೂರು  ನಿವಾಸಿ. ಇವರಿಗೆ ಈ ಉದ್ಯಮದಲ್ಲಿ 20 ವರ್ಷಗಳ ಅನುಭವವಿದೆ. ಇವರು ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ನ ಹಳೆ ವಿದ್ಯಾರ್ಥಿ. ಏಷ್ಯಾ ಮತ್ತು ಮಧ್ಯಪ್ರಾಚ್ಯದ ಅನೇಕ ರಾಷ್ಟ್ರಗಳಲ್ಲಿ ನವ ಆಹಾರೋದ್ಯಮವನ್ನು ಸ್ಥಾಪಿಸಿದ ಅನುಭವಿ. ಹೀಗಾಗಿ ಇವರಿಗೆ ಜಾಗತಿಕ ಮಾರುಕಟ್ಟೆಯ ಜ್ಞಾನವಿದೆ. 
 
ಮೆಕ್‌ಡೊನಾಲ್ಡ್‌ನಲ್ಲಿ 1988ರಲ್ಲಿ ಟ್ರೈನಿ ಆಗಿ ವೃತ್ತಿ ಆರಂಭಿಸಿದ  ಇವರು ನಂತರ ಜಿಎಫ್‌ಎ ನ  ಜಾಗತಿಕ ಮಟ್ಟದ  ಸಿಇಒ  ಆಗಿ 9 ದೇಶಗಳಿಗೆ ವ್ಯಾಪಾರ ವಿಸ್ತರಿಸಿದ ಕೀರ್ತಿ ಅವರಿಗಿದೆ. ‘ಪಾಪ ಜಾನ್ಸ್‌ ಇಂಡಿಯಾ’ದ ಕಾರ್ಯನಿರ್ವಹಣಾಧಿಕಾರಿಯಾಗಿ 70 ಮಳಿಗೆಗಳನ್ನು ನಿರ್ವಹಿಸಿದವರು. ಈಗ 48ಈಸ್ಟ್‌ ಮೂಲಕ ಸ್ವಂತ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. 
 
ಶೆಫ್‌ ನಭೋಜಿತ್‌ ಘೋಷ್‌ ರೆಸ್ಟೊರೆಂಟ್‌ನ ಸಹ ಸಂಸ್ಥಾಪಕ. ಈ ಕ್ಷೇತ್ರದಲ್ಲಿ 30ವರ್ಷದ ಅನುಭವಿ. ಬೆಂಗಳೂರು, ಮುಂಬೈಗಳಲ್ಲಿ 26 ಕಿಚನ್‌ಗಳನ್ನು ನಿರ್ವಹಿಸಿದ್ದಾರೆ.  ಒಬೆರಾಯ್‌, ರೆಡಿಸ್ಸನ್‌, ತಾಜ್‌ ಹೋಟೇಲುಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.
 
ವಿಳಾಸ: 48 ಈಸ್ಟ್‌, ಜಿಎನ್‌ಆರ್‌ ಎನ್‌ಕ್ಲೇವ್‌, 4ನೇ ಮಹಡಿ, ಅಪ್ಪಾರೆಡ್ಡಿ ಪಾಳ್ಯ, ಡಬಲ್‌ರೋಡ್‌, ಇಂದಿರಾನಗರ
ದೂರವಾಣಿ: 080–43404340  
ಅ್ಯಪ್‌: 48east  
ವೆಬ್‌ಸೈಟ್– www.fortyeighteast.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.