ADVERTISEMENT

ಬಾಯಿ ಚಪ್ಪರಿಸುವ ಮುರುಗು ಮುಸಲಮ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2017, 11:32 IST
Last Updated 26 ಜನವರಿ 2017, 11:32 IST
ಬಾಯಿ ಚಪ್ಪರಿಸುವ ಮುರುಗು ಮುಸಲಮ್
ಬಾಯಿ ಚಪ್ಪರಿಸುವ ಮುರುಗು ಮುಸಲಮ್   

ಹದವಾಗಿ ಬೇಯಿಸಿದ ಕೋಳಿ ಮಾಂಸಕ್ಕೆ ಮಸಾಲೆ ಹಾಗೂ ಪ್ರೈ ಮಾಡಿದ ಈರುಳ್ಳಿ ಬೆರಸಿ ಮುರುಗು ಮುಸಲಮ್‌ ತಯಾರಿಸಿದರೆ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು.

ಬೇಕಾಗುವ ಸಾಮಗ್ರಿಗಳು
1) ಚಿಕನ್                        1/4 ಕೆ.ಜಿ
2) ಶುಂಠಿ ಬೆಳ್ಳ್ಳುಳ್ಳಿ ಪೇಸ್ಟ್    1ಚಮಚ
3) ಧನಿಯ ಪುಡಿ                1/2ಚಮಚ
4) ಜೀರಿಗೆ ಪುಡಿ                 1/2ಚಮಚ
5) ಖಾರದಪುಡಿ                 1ಚಮಚ
6) ಗರಂಮಸಾಲ               1/2ಚಮಚ
7) ಅರಿಶಿನ                        ಸ್ವಲ್ಪ

ಇತರೆ ಸಾಮಾಗ್ರಿಗಳು
1) ಆಯಿಲ್                            2ಚಮಚ
2) ಚಕ್ಕೆ                                 2ಚಮಚ
3) ಲವಂಗ                             ಸ್ವಲ್ಪ
4) ಸೀಳಿದ ಹಸಿಮೆಣಸಿನಕಾಯಿ      4
5) ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು         1 ಕಪ್
6) ಮೊಸರು                            1/4ಕಪ್
7) ಕೊತ್ತಂಬರಿ ಸೊಪ್ಪು                 ಸ್ವಲ್ಪ
8) ನೀರು
9) ಸ್ವಲ್ಪ ಉಪ್ಪು

ADVERTISEMENT

ಮಾಡುವ ವಿಧಾನ: ಎಲ್ಲವನ್ನು ಕುಕ್ಕರ್‍ನಲ್ಲಿ 1 ಕಪ್ ನೀರಿನೊಂದಿಗೆ 1 ವಿಶಲ್ ಕೂಗಿಸುವುದು.  ಬಾಂಡ್ಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿದು ತೆಗೆದಿಡಿ. ಅದೇ ಬಾಂಡ್ಲಿಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ ಚಕ್ಕೆ, ಲವಂಗ, ಏಲಕ್ಕಿ, ಸೀಳಿದ ಮೆಣಸಿನಕಾಯಿ ಸೇರಿಸಿ ನಂತರ  ಬೇಯಿಸಿದ  ಕೋಳಿ ಹಾಗೂ 1/4 ಕಪ್ ರುಬ್ಬಿದ ಮಿಶ್ರಣವಾದ ಗೋಡಂಬಿ ಹಾಗೂ ಗಸಗಸೆ ಪೇಸ್ಟ್ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಮೊಸರನ್ನು ಬೀಟ್ ಮಾಡಿ ಕುದಿಯುತ್ತಿರುವ ಗ್ರೇವಿಗೆ ಸೇರಿಸಿ ಕಡೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಫ್ರೈ ಮಾಡಿದ ಈರುಳ್ಳಿಯನ್ನು ಸೇರಿಸಿದರೆ ಮುರುಗು ಮುಸಲಮ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.