ADVERTISEMENT

ಅದ್ಭುತ ಬದುಕು ನಿಮ್ಮದಾಗುತ್ತದೆ..!

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2015, 19:30 IST
Last Updated 29 ಡಿಸೆಂಬರ್ 2015, 19:30 IST

ಹೊಸ ವರ್ಷದಲ್ಲಿ ಎಲ್ಲವನ್ನೂ ಸಾವಕಾಶವಾಗಿ, ಸಮಾಧಾನದಿಂದ ಮಾಡಿ. ಯಾವುದೋ ಸ್ಥಳ ತಲುಪಬೇಕಿದ್ದಲ್ಲಿ ನಿಮ್ಮ ಉಸಿರನ್ನು ಗಮನಿಸಿ. ನಾನು ತಡವಾಗಿದ್ದೇನೆ ಎಂಬ ಭಾವ ತಂದುಕೊಳ್ಳಬೇಡಿ. ಇಂತಹ ಆಲೋಚನೆಗಳು ಉಸಿರಾಟದ ಲಯಕ್ಕೆ ಭಂಗ ತರುತ್ತವೆ.

‘ಎಲ್ಲವನ್ನೂ ಬೇಗನೆ ಮಾಡಬೇಕು’ ಮತ್ತು ‘ನಾನು ಅತಿಯಾಗಿ ಕೆಲಸ ಮಾಡಿದ್ದೇನೆ’ ಎಂಬ ಎರಡು ಭಾವಗಳು ಒತ್ತಡ ಸೃಷ್ಟಿಸುತ್ತವೆ. ದಿನವೊಂದಕ್ಕೆ 175 ಮಾದರಿಗಳನ್ನು ಪರೀಕ್ಷೆ ಮಾಡುವ ವಿಜ್ಞಾನಿಯಂತೆ ಆಗಿ. ಆ ವಿಜ್ಞಾನಿಯ ಮೇಲಧಿಕಾರಿ ನಿನಗೆ ಕೆಲಸ ಜಾಸ್ತಿಯಾಗಿರಬೇಕು ಎಂದು ಕನಿಕರ ತೋರಿದ. ಇಲ್ಲ ಸರ್.. ನಾನು ಒಂದು ಸಲಕ್ಕೆ ಒಂದು ಮಾದರಿಯನ್ನಷ್ಟೇ ಪರೀಕ್ಷೆ ಮಾಡುತ್ತೇನೆ.

ಅದರ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಹಾಗಾಗಿ ನನಗೆ ದಣಿವಾಗುವುದಿಲ್ಲ ಎಂದು ಆ ವಿಜ್ಞಾನಿ ಉತ್ತರಿಸಿದ. ಇಂತಹ ಮನಸ್ಥಿತಿ ಇದ್ದಾಗ ಯಾವುದೇ ಕ್ರಿಯೆ ಅಥವಾ ಆಲೋಚನೆ ನಿಮ್ಮ ಸಮಾಧಾನವನ್ನು ಹಾಳು ಮಾಡಲಾರದು. ಹೀಗೆ ಕೆಲಸ ಮಾಡುತ್ತ ಹೋದಾಗ ಮೈತುಂಬ ಹೂವರಳಿಸಿ ನಿಂತ ಮರದಂತೆ ನೀವು ಆಗುತ್ತೀರಿ. ಅದ್ಭುತ ಬದುಕು ನಿಮ್ಮದಾಗುತ್ತದೆ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.