ADVERTISEMENT

ದೀರ್ಘಾಯುಷ್ಯಕ್ಕೆ ಮೆಣಸಿನಕಾಯಿ!

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:59 IST
Last Updated 29 ಮೇ 2017, 7:59 IST
ದೀರ್ಘಾಯುಷ್ಯಕ್ಕೆ ಮೆಣಸಿನಕಾಯಿ!
ದೀರ್ಘಾಯುಷ್ಯಕ್ಕೆ ಮೆಣಸಿನಕಾಯಿ!   

ಊಟದಲ್ಲಿ ಹೆಚ್ಚು ಮೆಣಸಿನಕಾಯಿ ಬಳಸಿ ಕಣ್ಣು ಬಾಯಲ್ಲಿ ನೀರು ಸುರಿಸಿಕೊಳ್ಳಲು ಇಷ್ಟಪಡುವವರು ಕಡಿಮೆ. ಆದರೆ, ಹೀಗೆ ನಾಲಿಗೆಗೆ ಖಾರವಾಗಿ, ಕಣ್ಣಲ್ಲಿ ನೀರು ತರಿಸುವ ಮೆಣಸಿನಕಾಯಿ ಮನುಷ್ಯನ ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆಯಂತೆ!

‘ಮೆಣಸಿನಕಾಯಿಯನ್ನು ಬಳಸಿ ಆಯುಷ್ಯ ಹೆಚ್ಚಿಸಿಕೊಳ್ಳಬಹುದು ಎಂಬುದು ವಿಜ್ಞಾನಿಗಳ ಸಂಶೋಧನೆಯಿಂದ ತಿಳಿದುಬಂದಿದೆ’ ಎಂದು ‘ಪಾಪ್ಯುಲರ್‌ ಸೈನ್ಸ್‌’ ಸುದ್ದಿತಾಣ ವರದಿ ಮಾಡಿದೆ.

ವರ್ಮೋಂಟ್‌ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಆಧಾರದಲ್ಲಿ ಈ ವರದಿ ಪ್ರಕಟಿಸಲಾಗಿದೆ. ವರ್ಮೋಂಟ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬೆಂಜಮನ್‌ ಲಿಟನ್‌ ಬರ್ಗ್‌ ಮತ್ತು ಮುಸ್ತಫಾ ಚೋಪನ್‌ ಈ ಅಧ್ಯಯನ ನಡೆಸಿದ್ದಾರೆ.

ADVERTISEMENT

‘ದೀರ್ಘಾವಧಿಯಲ್ಲಿ ಮೆಣಸಿನಕಾಯಿ ಬಳಕೆ ಮಾಡುವುದರಿಂದ ಸಾವನ್ನು ಸಾಧ್ಯವಾದಷ್ಟೂ ದೂರ ಇಡಬಹುದು. ಅಮೆರಿಕದಲ್ಲಿ 1988ರಿಂದ 1994ರ ಅವಧಿಯಲ್ಲಿ ಮೆಣಸಿನಕಾಯಿಯನ್ನು ತಿಂದಿದ್ದ ಜನ ದೀರ್ಘಾಯುಗಳಾಗಿದ್ದರು. ಅವರ ದೀರ್ಘಾಯುಷ್ಯದ ಗುಟ್ಟು ಮೆಣಸಿನಕಾಯಿ’ ಎಂದು ಡಾ. ಬೆಂಜಮನ್‌ ಲಿಟನ್‌ಬರ್ಗ್‌ ತಿಳಿಸಿದ್ದಾರೆ.

‘ಮೆಣಸಿನಕಾಯಿಯನ್ನು ಬಳಸುವುದರಿಂದ ಅಧಿಕ ತೂಕದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ಮೆಣಸಿನಕಾಯಿಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ’ ಎನ್ನುತ್ತಾರೆ ಡಾ. ಲಿಟನ್‌ಬರ್ಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.