ADVERTISEMENT

ಮಕ್ಕಳ ಕಾಡುವ ಹೆಪಟೈಟಿಸ್–ಎ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:30 IST
Last Updated 22 ಜುಲೈ 2016, 19:30 IST
ಮಕ್ಕಳ ಕಾಡುವ ಹೆಪಟೈಟಿಸ್–ಎ
ಮಕ್ಕಳ ಕಾಡುವ ಹೆಪಟೈಟಿಸ್–ಎ   

ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಮಾನ್ಯ ಜ್ವರಗಳಾದ ಕೆಮ್ಮು, ಶೀತದ ಸಮಸ್ಯೆಗಳು ಕಾಡುವುದು ಸಾಮಾನ್ಯ. 
ಇದರ ಜೊತೆಗೆ  ಕಲುಷಿತ ನೀರು ಮತ್ತು ಆಹಾರಸೇವನೆಯಿಂದಾಗಿ  ತೀವ್ರ ಪಿತ್ತಜನಕಾಂಗದ ಸಮಸ್ಯೆಯಾದ ಹೆಪಟೈಟಿಸ್–ಎ ಸಂಭವಿಸುವ ಸಾಧ್ಯತೆ  ಹೆಚ್ಚು.

ಹೆಪೆಟೈಟಿಸ್–ಎ ಸೋಂಕಿನ ಕಾರಣಗಳು, ರೋಗಲಕ್ಷಣಗಳು ಹಾಗೂ ಅಪಾಯಗಳು: ಹೆಪೆಟೈಟಿಸ್–ಎ ಸೋಂಕು ಹರಡಲು ಪ್ರಮುಖ ಕಾರಣವೆಂದರ – ಸೋಂಕಿತ ಕಲ್ಮಶಗಳಿಂದ ಕಲುಷಿತಗೊಂಡ ನೀರು ಅಥವಾ ಆಹಾರವನ್ನು ಸೇವಿಸುವುದು.

ಸೋಂಕಿತ ವ್ಯಕ್ತಿಯೊಂದಿಗಿನ ನೇರ ಸಂಪರ್ಕದಿಂದ ಹೆಪೆಟೈಟಿಸ್-ಎ ಸೋಂಕು ಉಂಟಾಗುತ್ತದೆ. ನಮ್ಮ ದೇಶದಂತಹ ದೇಶಗಳಲ್ಲಿ ಮಳೆಗಾಲದಲ್ಲಿ ಚರಂಡಿ ಸಮಸ್ಯೆಯಿಂದ ನೀರು ಮತ್ತು ಆಹಾರ ಕಲುಷಿತಗೊಳ್ಳುವುದು ಸಾಮಾನ್ಯ ಹಾಗಾಗಿ ಹೆಪೆಟೈಟಿಸ್-ಎ ಸೋಂಕು ಹರಡಲು ದಾರಿಯಾಗುತ್ತದೆ.

ಹೆಪೆಟೈಟಿಸ್-ಎ ಸೋಂಕಿನ ವೈರಸ್ ಹರಡಿ ಬೆಳೆಯಲು ಸಾಮಾನ್ಯವಾಗಿ 14ರಿಂದ 28 ದಿನ ತೆಗೆದುಕೊಳ್ಳುತ್ತದೆ. ಹೆಪೆಟೈಟಿಸ್-ಎ ಸೋಂಕಿನ ಪ್ರಮುಖ ಲಕ್ಷಣವೆಂದರೇ ಕಾಮಾಲೆ (ಕಣ್ಣಿನ ಬಿಳಿ ಭಾಗ ಮತ್ತು ಚರ್ಮ ಹಳದಿಬಣ್ಣಕ್ಕೆ ಬದಲಾಗುವುದು),

ಜ್ವರ, ಹಸಿವು ಇಲ್ಲದಿರುವುದು, ದುರ್ಬಲತೆ, ಅತಿಸಾರ ಮತ್ತು ವಾಂತಿ. ಈ ರೋಗಲಕ್ಷಣಗಳು ಆರರಿಂದ ಮೇಲ್ಪಟ್ಟ ಮಕ್ಕಳಲ್ಲಿ ತೀವ್ರವಾಗಿರುತ್ತದೆ. ಶೇ. 70ರಷ್ಟು ಹೆಪೆಟೈಟಿಸ್–ಎ ಸೋಂಕಿತರು ಕಾಮಾಲೆ ರೋಗಲಕ್ಷಣ  ಹೊಂದಿರುತ್ತಾರೆ.

ಮಕ್ಕಳು ಮತ್ತು ವಯಸ್ಕರು ಈ ಹಿಂದೆ ಹೆಪೆಟೈಟಿಸ್–ಎ ರೋಗದಿಂದ ಬಳಲಿದ್ದು, ಅದಕ್ಕೆ ಸರಿಯಾದ ಚಿಕಿತ್ಸೆ  ಪಡೆಯದಿದ್ದರೆ ಸಾಮಾನ್ಯವಾಗಿ ಮತ್ತೆ ಹೆಪೆಟೈಟಿಸ್ ಸೋಂಕು ಬೆಳೆಯುವ ಸಾಧ್ಯೆತೆ  ಕಡಿಮೆ. ಆದರೂ ಸೋಂಕಿಗೆ ಒಳಗಾಗಿ ಅಗತ್ಯ ಚಿಕಿತ್ಸೆಯನ್ನು ಪಡೆಯದಿದ್ದರೆ ಅಪಾಯ. ನೈರ್ಮಲ್ಯರಹಿತ ಜನರಲ್ಲಿ, ಸೋಂಕಿತರೊಂದಿಗೆ ವಾಸವಾಗಿರುವ ಜನರಲ್ಲಿ ಹೆಪೆಟೈಟಿಸ್–ಎ ಸೋಂಕು ಉಂಟಾಗುವ ಅಪಾಯ  ಹೆಚ್ಚು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.