ADVERTISEMENT

ಝೇಂಕಾರದ ಗಡ್ಡ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ಝೇಂಕಾರದ ಗಡ್ಡ
ಝೇಂಕಾರದ ಗಡ್ಡ   

–ನಂದನ್‌ ಕುಮಾರ್‌ ಪೆರ್ನಾಜೆ

*

ಜೇನು ಎಂದಾಕ್ಷಣ ಬಾಯಿಯಲ್ಲಿ ನೀರೂರುವುದು ಸಹಜ. ಅದೇ ಜೇನುನೊಣ ಹತ್ತಿರ ಬಂದರೆ?

ADVERTISEMENT

ನಾವೆಲ್ಲ ಬೆಚ್ಚಿಬೀಳುತ್ತೇವೆ ಅಲ್ಲವೆ? ಆದರೆ, ಲೇಖನದ ಜತೆಗಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸೌಮ್ಯ ಪೆರ್ನಾಜೆ ಅವರ ಚಿತ್ರವನ್ನು ಒಮ್ಮೆ ನೋಡಿ. ಅವರ ಗದ್ದಗಳಲ್ಲಿ ಗಡ್ಡದಂತೆ ಕುಳಿತಿವೆ ಜೇನುನೊಣಗಳು! ಆ ನೊಣಗಳು ಹೇಳುತ್ತಿರುವ ಯಾವುದೋ ಮಧುರ ಮಾತೊಂದನ್ನು ತನ್ಮಯರಾಗಿ ಕೇಳಿಸಿ ಕೊಳ್ಳುವಂತೆ ಖುಷಿ ಯಿಂದ ಪೋಸು ನೀಡಿದ್ದಾರೆ ಸೌಮ್ಯ.

ಎಲ್ಲರಿಗೂ ಜೇನಿನ ಸವಿ ಬೇಕು. ಆದರೆ ಅದರ ಹಿಂದಿನ ಕಡಿತ (ನೋವು) ಯಾರಿಗೂ ಬೇಕಿಲ್ಲ. ಆದರೆ ಅವು ಏನೂ ಮಾಡುವುದಿಲ್ಲ ಎಂದು ತೋರಿಸಿಕೊಡುವುದೇ ಜೇನುನೊಣಗಳ ಜೊತೆಗೆ ಪೆರ್ನಾಜೆಯವರ ತುಂಟಾಟಕ್ಕೆ ಕಾರಣ.

ಪತಿಯೊಂದಿಗೆ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು ಗಡ್ಡದ ರೂಪದಲ್ಲಿ ಜೇನು ಕುಟುಂಬವನ್ನೇ ಮುಖದ ಮೇಲೆ ಕುಳ್ಳಿರಿಸಿಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಅವರು ಮುಖದ ಮೇಲೆಲ್ಲಾ ಬಿಟ್ಟುಕೊಂಡರೂ ಜೇನುನೊಣ ಕಚ್ಚಲ್ಲ. ರಾಣಿ ನೊಣವನ್ನು ಬಿಟ್ಟುಕೊಂಡ ತಕ್ಷಣ ಇತರ ನೊಣಗಳೂ ಮುತ್ತಿಕ್ಕಿ ಅವರ ಮುಖದ ಮೇಲೆ ಸುಂದರ ಗಡ್ಡ ನಿರ್ಮಾಣವಾಗುತ್ತದೆ.

ಜೇನು ಝೇಂಕಾರ, ಜೇನುತುಪ್ಪದ ಔಷಧಿ ಗುಣಗಳ ಕುರಿತು ಗಂಟೆಗಟ್ಟಲೆ ಮಾತನಾಡುವ ಸೌಮ್ಯ, ‘ಜೇನು ನೊಣಗಳು ಏನು ಮಾಡುವುದಿಲ್ಲ. ಅವು ಸಾಧು ಸ್ವಭಾವದವುಗಳು ಎಂದು ನಿರೂಪಿಸುವುದೇ ನನ್ನ ಉದ್ದೇಶ’ ಎಂದು ಹೇಳುತ್ತಾರೆ.

‘ಜೇನಿಗಾಗಿ ಜೇನುನೊಣಗಳ ಗೂಡನ್ನೇ ಬೆಂಕಿ ಹಾಕಿ ನಾಶ ಮಾಡಬೇಡಿ. ಕೃಷಿಯಲ್ಲಿ ಆ ನೊಣಗಳು ಪರಕೀಯ ಪರಾಗಸ್ಪರ್ಶಕ್ಕೆ ಕಾರಣವಾಗುತ್ತಿದ್ದು, ಇದರಿಂದ ಅಧಿಕ ಫಲೋತ್ಪತ್ತಿಗಳನ್ನು ಪಡೆಯಬಹುದು’ ಎನ್ನುತ್ತಾರೆ. ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನನ್ನ ಹೆಸರನ್ನು ಸೇರ್ಪಡೆ ಮಾಡಿಸಬೇಕೆಂಬ ಇರಾದೆಯೂ ಇದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.