ADVERTISEMENT

ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:50 IST
Last Updated 27 ಮೇ 2016, 19:50 IST
ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ
ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ   

ದ್ವಿತೀಯ ಪಿಯುಸಿ ಪರೀಕ್ಷೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ  ನ್ಯೂ ಶೋರ್ಸ್‌ ಇಂಟರ್‌ನ್ಯಾಷನಲ್‌ ಕಾಲೇಜು ಒಂದು ಮಹತ್ವದ ಅವಕಾಶ ನೀಡುತ್ತಿದೆ. ಈ ಮೂಲಕ ಅವರು ಸರ್ಕಾರದ ಮಾನ್ಯತೆ ಪಡೆದಿರುವ ಪೂರ್ಣಾವಧಿ ಪದವಿ ತರಗತಿಗೆ ಸೇರಿ ಹಾಗೂ ತಮ್ಮ ಓದನ್ನು ಅಡೆತಡೆಯಿಲ್ಲದೆ ಮುಂದುವರೆಸಬಹುದು.

‘ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮ’ (Inclusive Education Program) ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿರುವ ಮತ್ತು ಅನುತ್ತೀರ್ಣರಾಗಿರುವ ವಿಷಯಗಳ ಪರೀಕ್ಷೆಯನ್ನು ಮತ್ತೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ  ಓದು ಮುಂದುವರೆಸಲು ಅವಕಾಶ ಕಲ್ಪಿಸುತ್ತದೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಇಂಟರ್ನ್‌ಷಿಪ್‌ ಮಾಡಲು ಅಪರೂಪದ ಅವಕಾಶವನ್ನೂ ನೀಡುತ್ತದೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಬೇಸಿಗೆ ಕಾರ್ಯಕ್ರಮದ ವಿದ್ಯಾರ್ಥಿಯಾಗಿ ವಿಶೇಷ ವಿಷಯವೊಂದರ ಮೇಲೆ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆ. ‘ವಿಭಿನ್ನ ಪ್ರತಿಭೆಯುಳ್ಳ ಆದರೆ ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯತ್ತ ತರಲು ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮವನ್ನು ಪರಿಚಯಿಸಿದ್ದೇವೆ.

ನಮಗೆ ಈ ಯೋಜನೆಯಲ್ಲಿ ಎನ್‍ಐಓಎಸ್ ಸರಿಯಾದ ಜೊತೆಗಾರರಾಗಿದ್ದಾರೆ. ಏಕೆಂದರೆ ಎನ್‍ಐಓಸ್ ಮೂಲಕ ದ್ವಿತೀಯ ಪಿಯು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಿ ಸರಕಾರಿ ವಿಶ್ವವಿದ್ಯಾಲಯಗಳ ಪದವಿ ಶಿಕ್ಷಣಕ್ಕೆ ಸೇರಿಕೊಳ್ಳಬಹುದು’ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ನಿದೇರ್ಶಕ ಶಶಿಧರ ಚಿರಾನ್.

‘ಶಿಕ್ಷಣ ಮಂಡಳಿಯನ್ನು ಅವಲಂಬಿಸಿ, ಅನುತ್ತೀರ್ಣ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಯನ್ನು ತಗೆದುಕೊಳ್ಳಲು ಸುಮಾರು ಎಂಟು ತಿಂಗಳುಗಳ ಕಾಲ ನಿರೀಕ್ಷಿಸಬೇಕಾಗುತ್ತದೆ. ಆದರೆ, ಎನ್‍ಐಓಎಸ್‌ನಲ್ಲಿರುವ ಆನ್ ಡಿಮಾಂಡ್ ಎಕ್ಸಾಮಿನೇಷನ್ (ಓಡಿಈ) ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳು ವರ್ಷದಲ್ಲಿ ಯಾವಾಗ ಬೇಕಿದ್ದರೂ ಪರೀಕ್ಷೆ ತಗೆದುಕೊಳ್ಳಬಹುದು. ಇದು ಮುಕ್ತ ಮತ್ತು ದೂರ ಶಿಕ್ಷಣದ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ’ ಎನ್ನುತ್ತಾರೆ ಎನ್‍ಐಓಎಸ್ ಪ್ರಾದೇಶಿಕ ನಿರ್ದೇಶಕರಾದ ಎಸ್. ಚಂದ್ರಶೇಖರ್.
ಹೆಚ್ಚಿನ ಮಾಹಿತಿಗಾಗಿ www.newshores.in ಸಂಪರ್ಕಿಸಿ.

***************

ನಗರದಲ್ಲಿ ಇಂದು
ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟ ಕಾರ್ಯಕ್ರಮಗಳ ವಿವರಗಳನ್ನು ನಿಗದಿತ ದಿನಕ್ಕಿಂತ
ಕನಿಷ್ಠ 2 ದಿನ ಮುಂಚೆ ಕಳುಹಿಸಬೇಕು. ಇ–ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು. ಯೂನಿಕೋಡ್, ನುಡಿ, ಅಥವಾ ಬರಹ ತಂತ್ರಾಂಶ ಉಪಯೋಗಿಸಿ. ನಮ್ಮ ವಿಳಾಸ: ಸಂಪಾದಕರು, ಪ್ರಜಾವಾಣಿ, ‘ನಗರದಲ್ಲಿ ಇಂದು’ ವಿಭಾಗ. ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001.
ಇ–ಮೇಲ್‌: metropv@prajavani.co.in

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.