ADVERTISEMENT

ಅಪ್ಪ–ಅಮ್ಮನಿಗಾಗಿ ಹಾಡಿದ ಸಲ್ಲು

ಮಂಜುಶ್ರೀ ಎಂ.ಕಡಕೋಳ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಅಪ್ಪ–ಅಮ್ಮನಿಗಾಗಿ ಹಾಡಿದ ಸಲ್ಲು
ಅಪ್ಪ–ಅಮ್ಮನಿಗಾಗಿ ಹಾಡಿದ ಸಲ್ಲು   

ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ನಟನೆಯಷ್ಟೇ ಅಲ್ಲ ಹಾಡುವುದೂ ಗೊತ್ತು!

ಇತ್ತೀಚೆಗೆ ಸಲ್ಮಾನ್ ಅವರ ಅಪ್ಪ–ಅಮ್ಮ ತಮ್ಮ 53ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಅದೇ ದಿನ ಸಲ್ಲು ತಂಗಿ ಅರ್ಪಿತಾಳ ವಿವಾಹ ವಾರ್ಷಿಕೋತ್ಸವೂ ಇತ್ತು.

ಕುಟುಂಬದವರೆಲ್ಲಾ ಒಟ್ಟಾಗಿ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಸಲ್ಮಾನ್ ಮೈಕ್ ಕೈಗೆತ್ತಿಕೊಂಡು ಅಪ್ಪ–ಅಮ್ಮ ಮತ್ತು ತಂಗಿಗಾಗಿ ‘ಜಬ್ ಕೋಯಿ ಬಾತ್ ಬಿಗಡ್‌ ಜಾಯೇ’ ಹಾಡಿ ನೆರೆದವರನ್ನು ರಂಜಿಸಿದರಂತೆ. ಸಲ್ಲೂ ಹಾಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ADVERTISEMENT

ಅಂದಹಾಗೆ ಸಲ್ಲೂ ಜತೆ ಇತ್ತೀಚೆಗೆ ತಿರುಗಾಡುತ್ತಿರುವ ವಿದೇಶಿ ನಟಿ ಲೂಲಿಯಾ ವನ್ಚೂರ್ ಹಾಗೂ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್ ಕೂಡಾ ಈ ಪಾರ್ಟಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.