ADVERTISEMENT

ಆಡಿ,ಕುಣಿದು ಕುಪ್ಪಳಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಆಡಿ,ಕುಣಿದು ಕುಪ್ಪಳಿಸಿ
ಆಡಿ,ಕುಣಿದು ಕುಪ್ಪಳಿಸಿ   

‘ಓಪನ್‌ ಬಾಕ್ಸ್‌’ನಲ್ಲಿ ಏನಿದೆ....
ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ದಿ ಓಪನ್‌ ಬಾಕ್ಸ್‌ ರೆಸ್ಟೊರೆಂಟ್‌ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಅಲ್ಲದೇ ಸಂಗೀತ, ಪೇಂಟಿಂಗ್‌ ಸೇರಿದಂತೆ ವಿವಿಧ ವಿನೋದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಡಿಸ್ಕೊ ಜಾಕಿ (ಡಿಜೆ) ಪ್ರಾಂಕ್‌ಸ್ಟರ್‌ ಅವರು ನೃತ್ಯಾಸಕ್ತರನ್ನು ರಂಜಿಸಲಿದ್ದಾರೆ.  ಅಧೀರ್ ಅವರು ರೊಮ್ಯಾಂಟಿಕ್‌ ಗೀತೆಗಳನ್ನು ಹಾಡಲಿದ್ದಾರೆ.
‘ಡೋನ್ಟ್ ಬ್ರೇಕ್‌ ಮೈ ಆರ್ಟ್‌’, ‘ಲಾವಾ ಆಫ್‌ ಲವ್‌’, ‘ಬ್ಲಷಿಂಗ್‌ ಪನ್ನಕೊಟ್ಟ’ ಡೆಸರ್ಟ್‌ಗಳು ಪ್ರೇಮಿಗಳಿಗಾಗಿ ಸಿದ್ಧಪಡಿಸಲಾಗಿದೆ. ಜೊತೆಗೆ ಪೇಂಟಿಂಗ್‌ ಸ್ಪರ್ಧೆಯೂ ಇದೆ.

ಸ್ಥಳ: ದಿ ಓಪನ್‌ ಬಾಕ್ಸ್‌, ನಂ9, 4ನೇ ಮಹಡಿ, ಹಾಲ್‌ಕ್ಯಾನ್‌ ಕಾಂಪ್ಲೆಕ್ಸ್‌, ಸೇಂಟ್‌ ಮಾರ್ಕ್ಸ್‌ ರಸ್ತೆ,  ಸಮಯ: ಸಂಜೆ 6ರ ನಂತರ. ಮಾಹಿತಿಗೆ: 080 4129 0055

*
ಬಾರ್‌ನಲ್ಲಿ ಸಂಗೀತದೌತಣ
ಪ್ರೇಮಿಗಳ ದಿನಕ್ಕಾಗಿ ‘ಸೋಟಲಿ ಟೋಬರ್‌’ ಬಾರ್‌ ಮಂಗಳವಾರ ವಿಶೇಷ ವೇದಿಕೆ ಸಿದ್ಧಪಡಿಸಿದೆ. ಸಿಯಾನ್‌ ಫರ್ನಾಂಡಿಸ್‌ ಹಾಗೂ ಕ್ರಿಸ್ಟಿನಾ ಫರ್ನಾಂಡಿಸ್‌ ಅವರ ಗಾಯನವಿದೆ. ಹೇಮಂತ್‌ ಮುಂಡ್ಕರ್‌ ಅವರು ವಿಶೇಷ ಕಾಕ್‌ಟೇಲ್‌ ಸಿದ್ಧಪಡಿಸಲಿದ್ದಾರೆ. ಪ್ರೇಮಿಗಳಿಗೆ ಶಾಸ್ತ್ರೀಯ, ರೆಟ್ರೊ ಹಾಗೂ ರಾಕ್‌ ಸಂಗೀತ ಮುದ ನೀಡಲಿದೆ.
ಸ್ಥಳ– ಸೋಟಲಿ ಟೋಬರ್‌, ನಂ769, 80 ಅಡಿ ರಸ್ತೆ, ಕೋರಮಂಗಲ 4ನೇ ಬ್ಲಾಕ್‌. ಮಾಹಿತಿಗೆ: 080 4096 5500

*
‘ಟೆರೇಸ್‌’ನಲ್ಲಿ ಪ್ರೇಮಿಗಳ ದಿನ
ಯೆವುಚಾ ಟೆರೇಸ್‌ ರೆಸ್ಟೊರೆಂಟ್‌ ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಂಗೀತ ಸಂಜೆಯನ್ನು ಆಯೋಜಿಸಿದೆ. ಹೆಸರಾಂತ ಡಿಜೆ ಸನ್ನಿ ಜಾಹಿರ್‌ ಅವರು ಮನರಂಜನೆ ನೀಡಲಿದ್ದಾರೆ. ಸಂಗೀತ ಕೇಳುವ ಪ್ರೇಮಿಗಳಿಗೆ ಉಚಿತವಾಗಿ ವೈನ್‌ ಸಹ ಕುಡಿಯುವ ಅವಕಾಶವಿದೆ. ಸಂಜೆ 7.30ರಿಂದ ರಾತ್ರಿ 1.
ಸ್ಥಳ– ಯೆವುಚಾ ಟೆರೇಸ್‌, ಲೆವೆಲ್‌ 6,  1 ಎಂ.ಜಿ. ಮಾಲ್‌, ಎಂ.ಜಿ.ರಸ್ತೆ. ಟೇಬಲ್‌ ಕಾಯ್ದಿರಿಸಲು: 92222 22800

ADVERTISEMENT

*
ಪ್ರೇಮಿಗಳಿಗಾಗಿ ವಿಶೇಷ ಪಿಜ್ಜಾ
ಪಾಪ ಜಾನ್ಸ್  ಪ್ರೇಮಿಗಳ ದಿನಕ್ಕಾಗಿ ವಿಶೇಷ ಕೊಡುಗೆ ನೀಡಿದೆ. ₹349ಕ್ಕೆ ಹೃದಯ ಆಕಾರದ ಪಿಜ್ಜಾ, ಒಂದು ಬಾಟಲಿ ಪೆಪ್ಸಿ ಹಾಗೂ ಗೂಯಿ ಚಾಕೊಲೇಟ್‌ ನೀಡುತ್ತಿದೆ.

ಸಸ್ಯಾಹಾರಿಗಳಿಗಾಗಿ ಮಾರ್ಗರೀಟಾ ಪಿಜ್ಜಾ, ಮಾಂಸಾಹಾರ ಇಷ್ಟಪಡುವವರಿಗೆ ಮೀಡಿಯಂ ಲ್ಯಾಂಬ್‌ ಪೆಪ್ಪಿರೋನಿ ಪಿಜ್ಜಾ ಆಯ್ಕೆಗಳಿವೆ. ಪಾಪಾ ಜಾನ್ಸ್ ಔಟ್‌ಲೆಟ್‌ಗಳಲ್ಲಿ ಫೆ.16ರವರೆಗೆ ಈ ರಿಯಾಯ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.