ADVERTISEMENT

ಐಶ್ವರ್ಯಾಗೆ ಅಭಿಷೇಕ್‌ ಮೆಚ್ಚುಗೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 18 ಮೇ 2016, 19:30 IST
Last Updated 18 ಮೇ 2016, 19:30 IST
ನಟಿ ಐಶ್ವರ್ಯಾ ರೈ ಬಚ್ಚನ್‌
ನಟಿ ಐಶ್ವರ್ಯಾ ರೈ ಬಚ್ಚನ್‌   

ಈ ಸಲದ ಕಾನ್‌ ಚಿತ್ರೋತ್ಸವದಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ನೇರಳೆ ಬಣ್ಣದ ಲಿಪ್‌ಸ್ಟಿಕ್‌ ಬಳಿದುಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ  ವ್ಯಕ್ತವಾಗಿತ್ತು.

ಅವರ ಅಭಿಮಾನಿಗಳೇ  ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು ಈಗ ಹಳೆಯ ವಿಷಯ. ಅದೇನೇ ಇದ್ದರೂ ಅಭಿಷೇಕ್‌ ಬಚ್ಚನ್‌ ಅವರ ಕಣ್ಣಿಗೆ ಮಾತ್ರ ತಮ್ಮ ಬಾಳ ಸಂಗಾತಿ ಐಶ್‌ ಹೊಸ ಅವತಾರ ‘ಅದ್ಭುತ’ವಾಗಿ ಕಂಡಿದೆ.

ಇತ್ತೀಚೆಗೆ ಮುಂಬೈನಲ್ಲಿ ಸುದ್ದಿಸಂಸ್ಥೆಯೊಂದರ ಪ್ರತಿನಿಧಿಯೊಂದಿಗೆ ಮಾತನಾಡಿದ ಅಭಿಷೇಕ್‌ ‘ನನ್ನ ಪ್ರಕಾರ ಅವಳು ಎಂದಿನಂತೆ ಅದ್ಭುತವಾಗಿಯೇ ಕಾಣಿಸುತ್ತಿದ್ದಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾನ್‌ ಚಿತ್ರೋತ್ಸವದ ಕೆಂಪು ಹಾಸಿನ ಮೇಲೆ ಐಶ್ವರ್ಯಾ ಅವರ ನೇರಳೆ ಬಣ್ಣದ ತುಟಿಗಳು ವಿಶೇಷವಾಗಿ ಗಮನ ಸೆಳೆದಿದ್ದವು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅಪಾರ ಟೀಕೆಗೆ ಗ್ರಾಸವಾಗಿತ್ತು. ಐಶ್ಚರ್ಯಾ ಅಭಿನಯದ ‘ಸರಬ್ಜಿತ್‌’ ಸಿನಿಮಾ ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT