ADVERTISEMENT

ಐಷಾರಾಮಿ ಬರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಐಷಾರಾಮಿ ಬರವಣಿಗೆ
ಐಷಾರಾಮಿ ಬರವಣಿಗೆ   

ದುಬಾರಿ ಬೆಲೆಯ ಪೆನ್‌ ತಯಾರಿಕೆಗೆ ಹೆಸರುವಾಸಿಯಾಗಿರುವ ವಾಲ್ಡ್‌ಮನ್ ಬ್ರ್ಯಾಂಡ್‌ ಭಾರತದಲ್ಲಿ ನೂತನ ಶ್ರೇಣಿಯ ಬಾಲ್‌ಪೆನ್ ಬಿಡುಗಡೆ ಮಾಡಿದೆ. ಪೆನ್‌ ತಯಾರಿಕೆಗೆ ಜರ್ಮನ್ ಬೆಳ್ಳಿ ಬಳಸಲಾಗಿದೆ. ಸೂಕ್ಷ್ಮ ಕುಸುರಿ ಕೆಲಸಗಳಿಂದ ಈ ಪೆನ್ ಮತ್ತಷ್ಟು ಮೆರುಗು ಪಡೆದಿದೆ. ಪೆನ್‌ ನಿಬ್ ಚಿನ್ನದಿಂದ ಮಾಡಲಾಗಿದೆ. ₹49,999 ರಿಂದ  ಆರಂಭ.

*
‘ಸರಳ ಜೀವನ’ಕ್ಕೆ ವರ್ಷದ ಸಂಭ್ರಮ
ಸರಳ ಜೀವನ ವಾಹಿನಿಗೆ ಫೆ.19ಕ್ಕೆ ವಾರ್ಷಿಕೋತ್ಸವದ ಸಂಭ್ರಮ. ಐದು ಹೊಸ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಈ ಸವಿ ಗಳಿಗೆಯನ್ನು ವಾಹಿನಿ ಆಚರಿಸುತ್ತಿದೆ.

ಪೌರಾಣಿಕ ಕಥೆಯಾಧಾರಿತ ‘ಸೀತೆ ಲೋಕಮಾತೆ’,   ಚಿತ್ರರಂಗದ ಸುವರ್ಣ ಗಳಿಗೆಗಳನ್ನು ಅನಾವರಣ ಮಾಡುವ ‘ಬೆಳ್ಳಿಪರದೆ’, ಯೋಧರ ಸಾಹಸ ಕತೆಯನ್ನು ತಿಳಿಸುವ ‘ಜೈ ಜವಾನ್‌’ ಕಾರ್ಯಕ್ರಮದ ಜೊತೆಗೆ ‘ಕಚಗುಳಿ’ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ನಗಿಸಲು ವಾಹಿನಿ ಸಜ್ಜಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.