ADVERTISEMENT

‘ಒಂದಲ್ಲಾ ಎರಡಲ್ಲಾ’ ಗೊತ್ತಿದೆಯೇನ್ಲಾ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 14:06 IST
Last Updated 17 ಜೂನ್ 2018, 14:06 IST
‘ಒಂದಲ್ಲಾ ಎರಡಲ್ಲಾ’ ಗೊತ್ತಿದೆಯೇನ್ಲಾ!
‘ಒಂದಲ್ಲಾ ಎರಡಲ್ಲಾ’ ಗೊತ್ತಿದೆಯೇನ್ಲಾ!   

ಮೊದಲ ಸಿನಿಮಾ ‘ರಾಮಾ ರಾಮಾ ರೇ’ ಮೂಲಕ ಎಲ್ಲರ ಗಮನ ಸೆಳೆದ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಅವರ ಎರಡನೇ ಚಿತ್ರ ‘ಒಂದಲ್ಲಾ ಎರಡಲ್ಲಾ’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ದೊಡ್ಡ ಕಿವಿಗಳು, ಎರಡು ಕೋಡು, ಉದ್ದ ಬಾಲವಿರುವ ಬಾಲಕನ ಚಿತ್ರವನ್ನು ಕಪ್ಪು– ಬಿಳುಪಿನಲ್ಲಿ ತೋರಿಸಿದ್ದಾರೆ. ಹಿಂಭಾಗದಲ್ಲಿ ಜನರ ಸಾಲು, ದನ ಕರುಗಳು ಕಂಡಾಗ ಚಿತ್ರದ ಕತೆ ಏನಾಗಿರಬಹುದು ಎಂಬ ಕುತೂಹಲ ಮೂಡಿಸುತ್ತದೆ.

‘ಈ ಚಿತ್ರ ಸೋಷಿಯಲ್‌ ಡ್ರಾಮಾ ಚಿತ್ರವಾಗಿದ್ದು, ರಾಮಾ ರಾಮಾರೇ ಸಿನಿಮಾದಂತೆ ಕುತೂಹಲಭರಿತ, ವಿಭಿನ್ನ ಚಿತ್ರಕತೆ ಹೊಂದಿದೆ. ಏಳು ವರ್ಷದ ಬಾಲಕನೊಬ್ಬ ಏನನ್ನೋ ಹುಡುಕುತ್ತಾ ಸಮಾಜದೊಳಗೆ ಪ್ರವೇಶಿಸಿದಾಗ ಆ ಸಮಾಜವು ಅವನನ್ನು ಹೇಗೆ ನೋಡುತ್ತದೆ? ಅವನು ಸಮಾಜದ ದೃಷ್ಟಿಕೋನವನ್ನು ಹೇಗೆ ಬದಲಿಸಬಲ್ಲನು ಎಂಬುದನ್ನು ಈ ಚಿತ್ರ ನಿರೂಪಿಸುತ್ತದೆ’ ಎಂದು ಪೋಸ್ಟರ್‌ ಕುರಿತಾದ ಕುತೂಹಲಕ್ಕೆ ಉತ್ತರ ನೀಡುವ ನಿರ್ದೇಶಕ ಸತ್ಯಪ್ರಕಾಶ್‌ ಚಿತ್ರಕತೆಯ ಬಗ್ಗೆ ಜಾಸ್ತಿ ಗುಟ್ಟು ಬಿಟ್ಟುಕೊಡುವುದಿಲ್ಲ.

ಪಾಂಡವಪುರದ ಏಳು ವರ್ಷದ ಲೋಹಿತ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ. ಈ ಚಿತ್ರದಲ್ಲಿ ಮುಗ್ಧತೆಯೇ ಪ್ರಧಾನವಸ್ತು ಎಂದು ಸತ್ಯಪ್ರಕಾಶ್‌ ಹೇಳಿಕೊಂಡಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಈಗ ರೀ ರೆಕಾರ್ಡಿಂಗ್‌ ಹಂತದಲ್ಲಿದೆ. ಆಗಸ್ಟ್‌ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.  ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆದಿದ್ದು, 37 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಸಿನಿಮಾದಲ್ಲಿ ಮಂಗಳೂರು, ರಾಯಚೂರು, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ಎಂ.ಕೆ.ಮಠ, ಸಾಯಿಕೃಷ್ಣ ಕುಡ್ಲ, ನಾಗಭೂಷಣ್ ಹಾಗೂ ಇನ್ನಿತರರು ನಟಿಸಿದ್ದಾರೆ. ಕಲಾವಿದರದು ಸಂಪೂರ್ಣ ಹೊಸ ತಂಡ. ಆದರೆ ತಾಂತ್ರಿಕ ವಿಭಾಗದಲ್ಲಿ ‘ರಾಮಾ ರಾಮಾ ರೇ’ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಇದೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆ,  ಲವಿತ್ ಛಾಯಾಗ್ರಹಣ, ವರದರಾಜ ಕಾಮತ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.

ADVERTISEMENT


ಡಿ. ಸತ್ಯಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.