ADVERTISEMENT

ಕಪಾಳ ಮೋಕ್ಷದ ಕಿರಿಕ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ವಿವಾದದ ರಾಣಿ ರಾಖಿ ಸಾವಂತ ಇದೀಗ ಕಪಾಳ ಮೋಕ್ಷದ ಹೊಸ ಕಿರಿಕ್ ಮಾಡಿಕೊಂಡಿದ್ದಾರೆ. ‘ಮುಂಬೈ ಕ್ಯಾನ್ ಡಾನ್ಸ್ ಸಾಲಾ’ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ರಾಖಿ ಸಾವಂತಳ ಸ್ನೇಹಿತೆ ಮನೀಷಾ, ನಿರ್ದೇಶಕ ಸಚೇಂದ್ರ ಶರ್ಮಾ ಕೆನ್ನೆಗೆ ಬಾರಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಅವಕಾಶಕ್ಕಾಗಿ ತಾವು ಹೇಳಿದಂತೆ ಕೇಳಬೇಕು ಎಂದು ಶರ್ಮಾ ಕೋರಿಕೆ ಇಟ್ಟಿದ್ದರು ಎಂದು ಮನೀಷಾ ಅಲವತ್ತುಕೊಂಡಿದ್ದಾರೆ.

ತನ್ನ ಗೆಳತಿಯ ಸಹಾಯಕ್ಕೆ ಧಾವಿಸಿದ ರಾಖಿ, ‘ಅವಳು ಮಾಡಿದ್ದು ಸರಿಯಾಗಿಯೇ ಇದೆ’ ಎಂದಿದ್ದಾರೆ. ಅಲ್ಲದೇ, ಸ್ನೇಹಿತೆ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಆದರೆ ಇದನ್ನು ತಿರಸ್ಕರಿಸಿರುವ ಸಚೇಂದ್ರ ಶರ್ಮಾ, ಇದೆಲ್ಲ ಪಬ್ಲಿಸಿಟಿ ಸ್ಟಂಟ್. ಎಲ್ಲರ ಗಮನ ಸೆಳೆಯಲು ಹಾಗೂ ಅವಕಾಶಗಳು ಅರಸಿ ಬರುವಂತೆ ಮಾಡಲು ಆಗಾಗ ಇಂತಹ ಸ್ಟಂಟ್‌ಗಳನ್ನು ಮಾಡುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.