ADVERTISEMENT

ಖಳ ಪಾತ್ರ ಸುಲಭ: ಚುಂಕಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಚುಂಕಿ ಪಾಂಡೆ
ಚುಂಕಿ ಪಾಂಡೆ   

‘ಬಾಲ್ಯದಿಂದಲೂ ನನಗೆ ಖಳನಟರ ಮೇಲೆ ವಿಶೇಷ ಒಲವು. ನಾನು ಕಲಾವಿದನಾಗಲು ಅವರೇ ಪ್ರೇರಣೆ’ ಹೀಗೆಂದು ಖಳನಟರನ್ನು ಹೊಗಳಿರುವುದು ನಟ ಚುಂಕಿ ಪಾಂಡೆ.

‘ಬೇಗಂ ಜಾನ್‌’ ಸಿನಿಮಾದಲ್ಲಿ ಖಳನಾಯಕನಾಗಿರುವ ಇವರು, ಈ ಸಿನಿಮಾದ ಮೂಲಕ ತಮ್ಮ ಕನಸಿನ ಪಾತ್ರ ನಿರ್ವಹಣೆ ಸಾಧ್ಯವಾಗಿದೆ ಎಂದಿದ್ದಾರೆ.

‘ಮುಖಂದರ್‌ ಕಾ ಸಿಖಂದರ್‌’ ಸಿನಿಮಾದಲ್ಲಿನ ಅಮ್ಜದ್‌ ಖಾನ್‌ ನಟನೆ ನೋಡಿ ಬೆರಗಾಗಿದ್ದೆ. ಪ್ರತಿಯೊಬ್ಬ ವಿಲನ್‌ಗಳು ಆ ರೀತಿಯ ಹಾವಭಾವ ಹೊಂದಬೇಕು’ ಎನ್ನುತ್ತಾರೆ.  

‘ಕಾಮಿಡಿ, ವಿಲನ್‌ ಪಾತ್ರಗಳಲ್ಲಿ ನಟಿಸಿದ್ದು ಆಗಿದೆ. ಇನ್ನು ಮುಂದೆ ಬೇರೆಯವರನ್ನು ಅಳಿಸಬೇಕು. ಹಾಗಾಗಿ ಭಾವನಾತ್ಮಕ ಪಾತ್ರಗಳ ಹಂಬಲದಲ್ಲಿದ್ದೇನೆ’ ಎಂದು ತಮ್ಮ ಮುಂದಿನ ಹಾದಿಯ ಬಗ್ಗೆ ತಿಳಿಸಿದ್ದಾರೆ. ಕಾಮಿಡಿ ಪಾತ್ರಗಳಿಗಿಂತ ವಿಲನ್‌ ಪಾತ್ರ ಮಾಡುವುದು ಇವರಿಗೆ ಸುಲಭವಂತೆ.

‘ಜನರನ್ನು ನಗಿಸುವುದು ಅಷ್ಟೊಂದು ಸುಲಭವಲ್ಲ. ಸಂಭಾಷಣೆಯನ್ನು ಉರುಹೊಡೆದು ತೆರೆ ಮೇಲೆ ಓದಲು ಸಾಧ್ಯವಿಲ್ಲ. ಸಂದರ್ಭಕ್ಕೆ ತಕ್ಕಂತೆ ಹಾಸ್ಯ ಚಟಾಕಿ ಸಿಡಿಸುವುದು ಕಲೆ’ ಎನ್ನುವುದು ಇವರ ಅನುಭವದ ಮಾತು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.