ADVERTISEMENT

ಗಾಸಿಪ್‌ಗೆ ತಲೆಕೆಡಿಸಿಕೊಳ್ಳದ ನಟ ಸುಶಾಂತ್‌

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಗಾಸಿಪ್‌ಗೆ ತಲೆಕೆಡಿಸಿಕೊಳ್ಳದ ನಟ ಸುಶಾಂತ್‌
ಗಾಸಿಪ್‌ಗೆ ತಲೆಕೆಡಿಸಿಕೊಳ್ಳದ ನಟ ಸುಶಾಂತ್‌   

ನಟ ಸುಶಾಂತ್‌ ಸಿಂಗ್‌ ಕುರಿತು ಗಾಸಿಪ್‌ಗಳ ಸರಮಾಲೆಯೇ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಅವರೂ ಮೌನವಾಗಿರದೇ ಅದಕ್ಕೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅವರು ಗಾಸಿಪ್‌ ಮಾಡುವವರೇ ತಲೆ ಕೆಡಿಸಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ.

ಅದೇನಪ್ಪ ಅಂದರೆ, ‘ಗಾಸಿಪ್‌ ಸುದ್ದಿಗಳನ್ನು ನೋಡಿ ಬೇಜಾರಾಗಿ ಹೋಗಿದೆ. ಅದರಲ್ಲೂ ನಟಿಯರೊಂದಿಗೆ ತಳುಕು ಹಾಕಿರುವ ಸುದ್ದಿ ಮತ್ತು ಅಭಿಮಾನಿಗಳೊಂದಿಗೆ ಜಗಳವಾಡಿಕೊಂಡ ಸುದ್ದಿಯನ್ನು ಓದಿ ಬೇಜಾರಾಗಿ ಹೋಗಿದೆ’ ಎಂದಿದ್ದಾರೆ.

ADVERTISEMENT

‘ಗಾಸಿಪ್‌ಗಳಿಗೆಲ್ಲ ನಾನು ತಲೆಕೆಡಿಸಿಕೊಳ್ಳುವುದೇ ಇಲ್ಲ. ಅಂತಹ ಸುದ್ದಿಗಳು ನನ್ನ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ’ ಎಂದು ಹೇಳಿದ್ದಾರೆ.
‘ಇದು ಡಿಜಿಟಲ್‌ ಯುಗ.  ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಲೇ ಇರಬೇಕು. ಹಾಗಾಗಿ ಈ ರೀತಿ ಸುದ್ದಿ ಸೃಷ್ಟಿಸುತ್ತಾರೆ’ ಎನ್ನುವುದು ಅವರ ಅನುಭವದ ಮಾತು.

‘ಜನರೂ ಇಂತಹ ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಅವರು ಅದನ್ನು ನೋಡಿ ಮರೆತುಬಿಡುತ್ತಾರೆ’ ಎಂದಿದ್ದಾರೆ.
‘ಮಾಧ್ಯಮಗಳು ನನ್ನ ಬಗ್ಗೆ ಯಾವುದಾದರೂ ಆಸಕ್ತಿದಾಯಕ ಗಾಸಿಪ್‌ ಮಾಡಲಿ. ಆಗ ಮಾತ್ರ ಅದನ್ನು ಖುಷಿಯಿಂದ ಓದುವೆ’ ಎಂಬ ಜಾಣ ಉತ್ತರವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.