ADVERTISEMENT

ಗೃಹಿಣಿಯರಿಗೆ ಮನೆಯಲ್ಲೇ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಗೃಹಿಣಿಯರಿಗೆ ಮನೆಯಲ್ಲೇ ಉದ್ಯೋಗಾವಕಾಶ
ಗೃಹಿಣಿಯರಿಗೆ ಮನೆಯಲ್ಲೇ ಉದ್ಯೋಗಾವಕಾಶ   

ಶಾಂತಿನಗರದಲ್ಲಿರುವ ಇಂಡಿಯನ್‌ ಮನಿ.ಕಾಂ  ಕಂಪೆನಿಯು ವಿದ್ಯಾವಂತ ಗೃಹಿಣಿಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಹೊಸ ಯೋಜನೆಯನ್ನು ಆರಂಭಿಸಿದೆ. ಗೃಹಿಣಿಯರು ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು.

ಈ ಯೋಜನೆಯಲ್ಲಿ ಗೃಹಿಣಿಯರಿಗೆ  ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ಕಂಪ್ಯೂಟರ್‌ ಹಾಗೂ ಫೋನ್‌ ಅವರೇ ಖರೀದಿಸಬೇಕು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಬಿಡುವು ಸಿಕ್ಕಾಗ ಫೋನ್‌ ಸ್ವಿಚ್‌ ಆನ್‌ ಮಾಡಬಹುದು. ಕಂಪೆನಿಗೆ ಬರುವ ಕರೆಯನ್ನು ಉದ್ಯೋಗಿ ನಂಬರ್‌ಗೆ ಸಂಪರ್ಕಿಸಲಾಗುತ್ತದೆ. ನಂತರ ಗೃಹಿಣಿಯರು ಕರೆ ಮಾಡಿದವರಿಗೆ ಹಣಕಾಸು ಸೇವೆಯ ಸಲಹೆ ನೀಡಬೇಕಾಗುತ್ತದೆ.

‘ಉಚಿತ ತರಬೇತಿ ನೀಡುತ್ತೇವೆ. ತರಬೇತಿ ಪಡೆದೂ ಇಷ್ಟವಾಗದಿದ್ದರೆ ಒತ್ತಾಯ ಮಾಡುವುದಿಲ್ಲ.  ಗ್ರಾಹಕರಿಂದ ನಮ್ಮ ಡೇಟಾ ಸೆಂಟರ್‌ಗೆ ಕರೆ ಬರುತ್ತದೆ. ನಂತರ ಗೃಹಿಣಿಯರಿಗೆ ಹಾಗೂ ಗ್ರಾಹಕರಿಗೆ ಪುನಃ ಕರೆ ಹೋಗುತ್ತದೆ. ಸಂಪೂರ್ಣ ಕರೆಯನ್ನು ರೆಕಾರ್ಡ್‌ ಮಾಡಲಾಗುತ್ತದೆ. ಗೃಹಿಣಿಯರ ಸುರಕ್ಷತೆಗೆ ಆದ್ಯತೆ ಇದೆ. ಗ್ರಾಹಕರಿಗೆ ತಪ್ಪು ಸಲಹೆ ಕೊಟ್ಟರೆ, ಕರೆ ರದ್ದು ಮಾಡಿ, ಮತ್ತೆ ತರಬೇತಿ ನೀಡುತ್ತೇವೆ. ಒಟ್ಟಾರೆ ಎಲ್ಲಾ ವಿವರವು ಪಾರದರ್ಶಕವಾಗಿರುತ್ತದೆ’ ಎನ್ನುತ್ತಾರೆ  ಇಂಡಿಯನ್‌ ಮನಿ.ಕಾಂ ಸಿಇಒ ಸಿ.ಎಸ್‌.ಸುಧೀರ್‌.

ಒಂದು ಕರೆಗೆ ₹ 30 ನೀಡಲಾಗುತ್ತದೆ. ಒಬ್ಬರಿಗೆ ಹತ್ತರಿಂದ ಹದಿನೈದು ನಿಮಿಷ ಸಲಹೆ ನೀಡಬೇಕಾಗುತ್ತದೆ. ತಿಂಗಳಿಗೆ ಎಷ್ಟು ಗ್ರಾಹಕರಿಗೆ, ಎಷ್ಟು ಗಂಟೆಗಳ ಕಾಲ  ಸಲಹೆ ನೀಡಿದ್ದಾರೆ ಎಂಬುದನ್ನು ರೆಕಾರ್ಡ್‌ ಮಾಡಲಾಗುತ್ತದೆ. ದಿನಕ್ಕೆ ₹600ರವರೆಗೂ ದುಡಿಯಬಹುದು.

ಜೀವವಿಮೆ, ಮ್ಯೂಚುವಲ್‌ ಫಂಡ್‌, ಬ್ಯಾಂಕ್‌ ಸಾಲ, ಬ್ಯಾಂಕ್‌ ಖಾತೆ, ಡೆಪಾಸಿಟ್‌, ಪ್ರಾಪರ್ಟಿ, ಸ್ಟಾಕ್‌ ಎಕ್ಸಚೇಂಜ್‌ ಬಗ್ಗೆ ಸಲಹೆ ನೀಡುತ್ತಾರೆ.

ಅರ್ಹತೆ: ಉದ್ಯೋಗ ಬಯಸುವ ಗೃಹಿಣಿಯರು ಪದವಿ ಪೂರೈಸಿರಬೇಕು.  ಒಂದು ವರ್ಷ ಯಾವುದಾದರೂ ಕಂಪೆನಿಯಲ್ಲಿ ದುಡಿದ ಅನುಭವ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.