ADVERTISEMENT

ಜೂನ್‌ಗೆ ಬರುತ್ತಾನೆ ‘ಡಿಜೆ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ತೆಲುಗು ಚಿತ್ರರಂಗದ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿರುವ ‘ದುವ್ವಾಡ ಜಗನ್ನಾಥಂ’ (ಡಿಜೆ) ಚಿತ್ರ ಜೂನ್‌ಗೆ ತೆರೆಗೆ ಬರಲಿದೆ.

ಟೀಸರ್​ನಲ್ಲಿ ಅಲ್ಲು ಅರ್ಜುನ್ ಬ್ರಾಹ್ಮಣ ಅಡುಗೆ ಭಟ್ಟನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಹಾರ,  ಜನಿವಾರ, ಕೆಂಪು ಪಂಚೆ ಹಾಗೂ ಹೆಗಲಲ್ಲಿ ಶಲ್ಯ ಹಾಕಿಕೊಂಡು ವಿಭಿನ್ನ ಗೆಟಪ್‌ನಲ್ಲಿ ಮಿಂಚುತ್ತಿದ್ದಾರೆ. ಗೆಟಪ್‌ ಕಂಡ ಅಭಿಮಾನಿಗಳು ಕಥೆ ಹೇಗಿರಬಹುದೆಂದು ಚರ್ಚೆ ಶುರು ಮಾಡಿದ್ದಾರೆ.

ಸಂಪ್ರದಾಯಸ್ಥ ಬ್ರಾಹ್ಮಣ ಯುವಕನ ಪಾತ್ರದಲ್ಲಿ ಅಲ್ಲು ಅರ್ಜುನ್ ಅಭಿನಯಿ ಸುತ್ತಿರುವುದು ಇದೇ ಮೊದಲು. ಅವರ ಪಾತ್ರಕ್ಕೆ ಎರಡು ವ್ಯಕ್ತಿತ್ವ ಇದೆ ಎಂಬುದು ಟೀಸರ್ ನೋಡಿದಾಗ ಮನದಟ್ಟಾದ ಅಂಶ. ಈ ಚಿತ್ರಕ್ಕಾಗಿ ವಿಜಯ ಪ್ರಕಾಶ್‌ ಹಾಡಿರುವ ‘ಶರಣಂ ಭಜೆ ಭಜೆ’ ಗೀತೆ ಹೆಚ್ಚು ಜನಪ್ರಿಯವಾಗಿದೆ.
ನಾಯಕಿಯಾಗಿ ‘ಮೊಹೆಂಜೊದಾರೋ’ ಬೆಡಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ದೇವಿಶ್ರೀ ಪ್ರಸಾದ್ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.