ADVERTISEMENT

ತೊಡಬಹುದಾದ ಸೀರೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2014, 19:30 IST
Last Updated 11 ಡಿಸೆಂಬರ್ 2014, 19:30 IST
ತೊಡಬಹುದಾದ ಸೀರೆ
ತೊಡಬಹುದಾದ ಸೀರೆ   

ಸೀರೆಯುಟ್ಟ ನೀರೆಯ ಅಂದವನ್ನು ವರ್ಣಿಸದವರೇ ಇಲ್ಲ. ಸೀರೆಯುಟ್ಟ ನಾರಿಯ ಅಂದಕ್ಕೆ ಬೇರೇನೂ ಸಾಟಿ ಇಲ್ಲ ಎಂದೆಲ್ಲಾ ಹೇಳುತ್ತಾರೆ. ಆದರೆ ಈಗ ಎಷ್ಟೋ ಮಂದಿಗೆ ಸೀರೆ ಉಡುವುದೆಂದರೆ  ತಲೆನೋವಿನ ಕೆಲಸ. ಅದಕ್ಕಾಗಿ ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಸರ್ಕಸ್‌ ಮಾಡುತ್ತಾರೆ.

ಸೀರೆ ಎಂದರೆ ಹೆದರುವ ಮಹಿಳೆಯರಿಗಾಗಿ ಸಖಿ ಫ್ಯಾಷನ್ಸ್‌ ಬುಟಿಕ್‌ ಈಗ ಇನ್‌ಸ್ಟಾ ಸೀರೆಗಳನ್ನು ಪರಿಚಯಿಸಿದೆ. ಹೆಣ್ಣುಮಕ್ಕಳು ಕೇವಲ 30 ಸೆಕೆಂಡುಗಳಲ್ಲಿ ಈ ಇನ್‌ಸ್ಟಾ ಸೀರೆಗಳನ್ನು ಯಾವುದೇ ಕಷ್ಟವಿಲ್ಲದೆ ತೊಡಬಹುದು. ಅಳತೆಗೆ ತಕ್ಕಂತೆ ಕಸ್ಟಮ್ ಮೇಡ್ ಇದಾಗಿದ್ದು, ಲಿಕ್ರಾ ಮತ್ತು ಇಲಾಸ್ಟೈನ್ ಬ್ಲೆಂಡೆಡ್ ಸಿಲ್ಕ್‌ನಿಂದ ತಯಾರಿಸಲಾಗಿದೆ. ಅದಕ್ಕೆ ನೆಟ್ ಜೋಡಿಸಿ ಗ್ಲಾಮರಸ್ ಸೀಕ್ವಿನ್ ನೀಡಲಾಗಿದೆ.

ಚಂದ್ರಾ ಮತ್ತು ನೀಲಾ ಈ ಸೀರೆಗಳನ್ನು ಸಿದ್ಧಪಡಿಸಿದ್ದು, ಸೀರೆ ಉಡುವವರಿಗೆ ಹೊಂದಾಣಿಕೆ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಕಲೆಕ್ಷನ್‌ನ ಬೆಲೆ ₨ 9 ಸಾವಿರದಿಂದ ₨18,500ರದವರೆಗೆ ಇದೆ. ಈ ಸೀರೆಗಳು ನಗರದ ಇಂದಿರಾನಗರ, ಜಯನಗರ ಮತ್ತು ಸದಾಶಿವನಗರದ ಸಖಿ ಫ್ಯಾಷನ್ಸ್‌ನಲ್ಲಿ ಲಭ್ಯ. ಆನ್‌ಲೈನ್‌ ಮೂಲಕ ಸಹ ಖರೀದಿಸಬಹುದು. ಮಾಹಿತಿಗೆ: www.SakhiFashions.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.