ADVERTISEMENT

‘ದಸ್ತಕರ್‌ ಎಕ್ಸ್‌ಪೊ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
‘ದಸ್ತಕರ್‌ ಎಕ್ಸ್‌ಪೊ’
‘ದಸ್ತಕರ್‌ ಎಕ್ಸ್‌ಪೊ’   

‘ದಸ್ತಕರ್‌  ಎಕ್ಸ್‌ಪೊ’

ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ‘ದಸ್ತಕರ್‌ ಎಕ್ಸ್‌ಪೊ’  ಚಿತ್ರಕಲಾ ಪರಿಷತ್‌ನಲ್ಲಿ  ಆರಂಭವಾಗಿದೆ. ಮಾ.26ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲ ಹಾಗೂ ಕೈಮಗ್ಗದ ವಸ್ತುಗಳ ಹೇರಳ ಸಂಗ್ರಹವಿದೆ.

ಸೀರೆ, ಕುರ್ತಾ ಮುಂತಾದ ಉಡುಪುಗಳು, ಮ್ಯಾಟ್, ಟೇಬಲ್ ಕವರ್‌ಗಳು, ಬೆಡ್‌ಶೀಟ್‌ಗಳು ಹಾಗೂ  ಎಲ್ಲಾ ಬಗೆಯ ಗೃಹ ಬಳಕೆ ವಸ್ತುಗಳು ಇಲ್ಲಿ ಲಭ್ಯ. ಕೊಯಮತ್ತೂರು ರೇಷ್ಮೆ, ತಮಿಳುನಾಡಿನ ಕಾಂಜೀವರಂ ರೇಷ್ಮೆ, ಬೆಂಗಳೂರು ರೇಷ್ಮೆ, ಜಾರ್ಜೆಟ್ ಸೀರೆಗಳು, ಕಚ್ಚಾ ರೇಷ್ಮೆ ಕೂಡ ಲಭ್ಯವಿದೆ. 

ADVERTISEMENT

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ,   ಸಮಯ: ಬೆಳಗ್ಗೆ 10.30 ರಿಂದ ರಾತ್ರಿ 8.30ರವರೆಗೆ.

**

ಯುಗಾದಿ ಮೇಳ


ಅಂಬೇಡ್ಕರ್‌ ವೀದಿಯಲ್ಲಿ ಆಯೋಜಿಸಿರುವ ಕರಕುಶಲ ವಸ್ತುಗಳು ಮತ್ತು ಕೈಮಗ್ಗದ ಜವಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ಕಾಟೇಜ್ ಯುಗಾದಿ ಮೇಳ’ವನ್ನು ನಟಿ ಮತ್ತು ರೂಪದರ್ಶಿ ಮೇಘಾ ಅಪ್ಪಯ್ಯ ಉದ್ಘಾಟಿಸಿದರು.

ಮೇಳವು ಮಾ.29ರವರೆಗೆ ನಡೆಯುತ್ತದೆ.

ವಿಳಾಸ: ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌, ನಂ 3, ಬಿ.ಆರ್.ಅಂಬೇಡ್ಕರ್‌ ವೀದಿ (ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಎದುರು). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.