ADVERTISEMENT

ನನ್ನ ನಿನ್ನ ಪ್ರೇಮಗೀತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಬಲೂನುಗಳನ್ನು ಆಗಸಕ್ಕೆ ಹಾರಿ ಬಿಟ್ಟು ಹಮ್ ತುಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಲೂನುಗಳನ್ನು ಆಗಸಕ್ಕೆ ಹಾರಿ ಬಿಟ್ಟು ಹಮ್ ತುಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   

ಪ್ರೇಮಿಗಳ ದಿನದ ಸಂಜೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದ್ದು ‘ಹಮ್‌ತುಮ್‌; ನನ್ನ ನಿನ್ನ ಪ್ರೇಮ ಗೀತೆ’ ಕಾರ್ಯಕ್ರಮ. ಕೀಬೋರ್ಡ್ ಕಲಾವಿದ ಉಮೇಶ್ ಹಾಗೂ ಗಾಯಕಿ ಉಷಾ ಉಮೇಶ್  ಈ ಸಂಗೀತ ಸಂಜೆ ಆಯೋಜಿಸಿದ್ದರು.

ಬಾಲಿವುಡ್, ಸ್ಯಾಂಡಲ್‌ವುಡ್‌ನ ಹಳೆಯ ಹಾಡುಗಳು ಕೇಳುಗರನ್ನು ನೆನಪಿನ ಲೋಕಕ್ಕೆ ಕರೆದೊಯ್ಯುವಲ್ಲಿ ಸಫಲವಾಯಿತು. ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ನುಡಿಸಿದ ಬಾಲಿವುಡ್ ರೋಮ್ಯಾಂಟಿಕ್ ಹಾಡುಗಳು ನೆರೆದಿದ್ದ ಸಂಗೀತ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಹಿರಿಯ ಗಾಯಕಿ ಕಸ್ತೂರಿ ಶಂಕರ್, ಕಲಾವಿದರಾದ ಉಷಾ ಉಮೇಶ್, ಮೋಹನ್ ರಾಧಾಕೃಷ್ಣ, ಶ್ರೀನಿವಾಸ ಮೂರ್ತಿ, ಈಶ್ವರಿ ಪ್ರಸಾದ್, ಲಕ್ಷ್ಮೀ ರಾಧಾಕೃಷ್ಣ, ಸ್ಮೃತಿ ಸೇರಿದಂತೆ ಹಲವರ ಗಾಯನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.