ADVERTISEMENT

‘ನಾಚಿಕೆ ಆಗಲ್ಲ’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಕಲ್ಕಿ ಕೊಯ್ಲಿನ್
ಕಲ್ಕಿ ಕೊಯ್ಲಿನ್   

‘ಹೌದು ನಗ್ನವಾಗಿ ಫೋಟೊ ತೆಗೆಸಿಕೊಂಡಿದ್ದೇನೆ. ಹಾಗಂತ ನನಗೇನೂ ನಾಚಿಕೆಯಾಗಿಲ್ಲ. ಇಷ್ಟಕ್ಕೂ ನನ್ನ ಫೋಟೊ ತೆಗೆದದ್ದು ಮಹಿಳಾ ಛಾಯಾಗ್ರಾಹಕಿ. ಪುರುಷ ಅಲ್ಲ’

ಇತ್ತೀಚೆಗಷ್ಟೇ ಸಂಪೂರ್ಣ ನಗ್ನರಾಗಿ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಹುಭಾಷಾ ನಟಿ ಕಲ್ಕಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ರೀತಿಯಿದು.

‘ಹೆಣ್ಣಿನ ಫೋಟೊವನ್ನು ಪುರುಷ ಮತ್ತು ಮಹಿಳಾ ಛಾಯಾಗ್ರಾಹಕರು ತೆಗೆಯುವ ಮತ್ತು ಪರಿಭಾವಿಸುವ ರೀತಿ ಸಂಪೂರ್ಣ ಭಿನ್ನವಾಗಿರುತ್ತದೆ. ಆದರೆ ನನ್ನ ಫೋಟೊ ತೆಗೆದಿರುವುದು ರಿವಾ ಬಬ್ಬರ್‌. ಈ ಕಾರಣಕ್ಕೇ ನಾನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದೆ ಹೆಣ್ಣಿನ ಫೋಟೊವನ್ನು ಹೆಣ್ಣೇ ತೆಗೆದಿರುವಾಗ ನಾಚಿಕೊಳ್ಳುವಂತಹುದು ಏನಿದೆ?’ ಎಂದು ಕಲ್ಕಿ ನಿರ್ಭಿಡೆಯಿಂದ, ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

ADVERTISEMENT

ಕಲ್ಕಿ ಎಷ್ಟೇ ಬೋಲ್ಡ್‌ ಆಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರೂ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ನೀನ್ಯಾಕೆ ಇನ್‌ಸ್ಟಾಗ್ರಾಂನಲ್ಲಿ ಆ ಫೋಟೊ ಹಾಕಿದೆ? ವಯಸ್ಕರಿಗೆ ಮೀಸಲಾದ ವೆಬ್‌ಸೈಟ್‌ಗಳಿಗೆ ಹಾಕಬಹುದಿತ್ತಲ್ಲಾ?’ ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ‘ಭಾರತೀಯ ಸಂಸ್ಕೃತಿಯನ್ನು ಯಾಕೆ ಹೀಗೆ ಹಾಳು ಮಾಡುತ್ತೀದ್ದೀಯಾ. ನಿನ್ನ ನಗ್ನತೆಗೆ ಒಂದು ಇತಿಮಿತಿ ಇರಲಿ’ ಎಂದೂ ಎದಿರೇಟು ನೀಡಿದ್ದಾರೆ. ಕಲ್ಕಿ ಅಪ್‌ಲೋಡ್‌ ಮಾಡಿರುವ ನಗ್ನ ಫೋಟೊಗಳಿಗೆ ‘ಕತ್ತಲು ಮತ್ತು ಬೆಳಕಿನ ನಡುವೆ’ ಎಂಬ ಅಡಿಬರಹವನ್ನೂ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಶಾ ಗುಪ್ತಾ ಇದೇ ರೀತಿ ನಗ್ನ ಫೋಟೊ ಹಾಕಿಕೊಂಡು ಸುದ್ದಿಯಾಗಿದ್ದರು. ಬಾಲಿವುಡ್‌ನಲ್ಲಿ ನಗ್ನ ಫೋಟೊ ಮತ್ತು ವಿಡಿಯೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸುದ್ದಿ ಮಾಡುವುದೂ ನಟಿಯರಿಗೆ ಒಂದು ಚಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.