ADVERTISEMENT

ಪರಕೀಯ ಭಾವದಲ್ಲಿ ಸ್ವರಾ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ಸ್ವರಾ ಭಾಸ್ಕರ್‌
ಸ್ವರಾ ಭಾಸ್ಕರ್‌   

ನಟಿಸಿದ ಎಲ್ಲಾ ಚಿತ್ರಗಳಲ್ಲಿಯೂ ನಟನೆಗೆ ಉತ್ತಮ ಅಂಕಗಳನ್ನು ಪಡೆದರೂ, ಅವಕಾಶದಿಂದ ವಂಚಿತರಾದವರು ಸ್ವರಾ ಭಾಸ್ಕರ್‌.
ಈ ಕುರಿತು ಅವರಿಗೂ ಬೇಸರವಿದೆ.

‘ನಟನೆಯ ಮೂಲಕ ಗುರುತಿಸಿಕೊಂಡರೂ ಬಾಲಿವುಡ್‌ನಲ್ಲಿ ನಾನು ಪರಕೀಯಳಾಗಿದ್ದೇನೆ’ ಎನ್ನುವ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಈ ಕ್ಷೇತ್ರದಲ್ಲಿ ಎಲ್ಲರೂ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಅವಕಾಶಕ್ಕಾಗಿ ಪ್ರತಿ ದಿನವೂ ನಾನು ಹೋರಾಡುತ್ತಲೇ  ಇದ್ದೇನೆ’ ಎಂದಿದ್ದಾರೆ ಅವರು.

‘ಬಹುಶಃ ಎಲ್ಲಾ ವೃತ್ತಿಯಲ್ಲಿಯೂ ಇದು ಸಾಮಾನ್ಯ ಎನಿಸುತ್ತದೆ. ಉತ್ತಮ ಅವಕಾಶ ಪಡೆಯುವುದು ಕಷ್ಟದ ಕೆಲಸ’ ಎನ್ನುವ ಮೂಲಕ ಬಾಲಿವುಡ್‌ನಲ್ಲಿ ತಮಗೆ ದೊರಕಿದ ಮನ್ನಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಟನೆಗೆ ಮೆಚ್ಚುಗೆ ಪಡೆಯಬೇಕಾದರೆ ಸಿನಿಮಾದ ಗೆಲುವು ಅಗತ್ಯ. ಸಿನಿಮಾ ಗೆದ್ದರೆ ಮಾತ್ರವೇ ನಿರ್ಮಾಪಕರಿಗೆ ಮತ್ತೊಂದು ಸಿನಿಮಾ ಮಾಡಲು ಪ್ರೇರಣೆ ದೊರಕುತ್ತದೆ. ಹಾಗಾಗಿ ನನಗೂ ಸಿನಿಮಾ ಗೆಲ್ಲುವುದಷ್ಟೇ ಮುಖ್ಯ’ ಎಂದಿದ್ದಾರೆ. ‘ಅನಾರ್ಕಲಿ ಆಫ್‌ ಆರಾ’ ಸಿನಿಮಾದ ನಂತರ ಸ್ವರಾ ಕೈಯಲ್ಲಿ ಯಾವುದೇ ಅವಕಾಶಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT