ADVERTISEMENT

ಬೇಸಿಗೆ ಉಡುಪುಗಳ ಫ್ಯಾಷನ್ ಷೋ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 19:30 IST
Last Updated 16 ಏಪ್ರಿಲ್ 2015, 19:30 IST

ಬೇಸಿಗೆಯಲ್ಲಿ ಧರಿಸಬಹುದಾದ ಉಡುಪುಗಳ ಸಂಗ್ರಹವನ್ನು ಇತ್ತೀಚೆಗೆ ನಗರದ ಫಿನಿಕ್ಸ್‌ ಮಾರ್ಕೆಟ್‌ ಸಿಟಿಮಾಲ್‌ನಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್‌ ಷೋನಲ್ಲಿ ಪ್ರದರ್ಶಿಸಲಾಯಿತು.

ಫ್ಯೂಚರ್‌ ಗ್ರೂಪ್‌ನ ಭಾಗವಾದ ಫ್ಯಾಷನ್‌ ಬಿಗ್‌ಬಜಾರ್‌ನ (ಎಫ್‌ಬಿಬಿ) ಅಪರೂಪದ ಹಾಗೂ ವಿಶಿಷ್ಟ ಬೇಸಿಗೆ ಉಡುಪುಗಳನ್ನು ಧರಿಸಿದ್ದ ರೂಪದರ್ಶಿಯರು ರ್‍್ಯಾಂಪ್‌ ಮೇಲೆ ಕ್ಯಾಟ್‌ವಾಕ್‌ ಮಾಡಿದರು.

ದಿನನಿತ್ಯ ಬಳಸುವ ಉಡುಪುಗಳು, ಕ್ಯಾಶುಯಲ್ಸ್‌, ಕಾಲೇಜು, ಕಚೇರಿ, ಸಮಾರಂಭಗಳು ಸೇರಿದಂತೆ ಎಲ್ಲ ಸಂದರ್ಭಗಳಲ್ಲಿಯೂ ಬಳಸಬಹುದಾದ ಸಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳನ್ನು ಈ ಸಂಗ್ರಹ ಹೊಂದಿದೆ.

ಫ್ಯಾಷನ್‌ ಷೋ ನಂತರ ನಡೆದ ನೃತ್ಯ ಹಾಗೂ ಮಿಮಿಕ್ರಿ ಕಾರ್ಯಕ್ರಮಗಳು ನೆರೆದಿದ್ದ ಜನರ ಮನಸೂರೆಗೊಂಡವು. ಜತೆಗೆ ಬಂದಿದ್ದ ಜನರ ಮನರಂಜನೆಗಾಗಿ ನಾನಾ ರೀತಿಯ ಆಟಗಳನ್ನು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನಗಳನ್ನೂ ವಿತರಿಸಲಾಯಿತು.

‘ಎಫ್‌ಬಿಬಿಯ ಬೇಸಿಗೆ ಸಂಗ್ರಹವು ತುಂಬಾ ಚೆನ್ನಾಗಿದ್ದು, ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯ. ಎಲ್ಲರಿಗೂ ಇಷ್ಟವಾಗುವ ಬಣ್ಣಗಳು ಹಾಗೂ ನಾನಾ ರೀತಿಯ ವಿನ್ಯಾಸಗಳಲ್ಲಿ ರೂಪುಗೊಂಡಿರುವ ಈ ಸಂಗ್ರಹ ರಲ್ಲ ವಯಸ್ಸಿನವರಿಗೂ ಇಷ್ಟವಾಗಲಿದೆ’ ಎಂದು ಫ್ಯೂಚರ್‌ ರಿಟೇಲ್‌ನ ದಕ್ಷಿಣ ವಲಯದ ಆಪರೇಷನ್ಸ್‌ ಮುಖ್ಯಸ್ಥ ಸಂಬ್ರಿದ್ಧಿ ಹೇಳಿದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.