ADVERTISEMENT

ಯೋಗ ಹಾಗೂ ಸ್ವರಕ್ಷಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಯೋಗ ಹಾಗೂ ಸ್ವರಕ್ಷಣಾ ಶಿಬಿರ
ಯೋಗ ಹಾಗೂ ಸ್ವರಕ್ಷಣಾ ಶಿಬಿರ   

ಅಕ್ಷರ್‌ ಪವರ್‌ ಯೋಗ ಅರಮನೆ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯೋಗ ಹಾಗೂ ಸ್ವರಕ್ಷಣಾ ಶಿಬಿರದಲ್ಲಿ ಸುಮಾರು 3000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. 

ಆರೋಗ್ಯಯುತ ಬೆಂಗಳೂರು ಎನ್ನುವ ಪರಿಕಲ್ಪನೆಯಲ್ಲಿ ನಡೆದ ಈ ಯೋಗ ಶಿಬಿರವನ್ನು ಕುಸ್ತಿಪಟುಗಳಾದ ಗೀತಾ ಫೋಗಟ್‌ ಹಾಗೂ ಬಬಿತಾ ಫೋಗಟ್‌ ಉದ್ಘಾಟಿಸಿದರು.

‘ಯೋಗಾಭ್ಯಾಸ ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ನಮ್ಮ ಸುತ್ತಮುತ್ತಲ ಸೂಕ್ಷ್ಮ ಬೆಳವಣಿಗೆಯನ್ನು ಗ್ರಹಿಸಲು ಯೋಗದಿಂದ ಸಾಧ್ಯ. ಬೆಳಿಗ್ಗೆ ಬೇಗ ಎದ್ದು ಮಾಡುವ ವ್ಯಾಯಾಮ, ಕಠಿಣ ಪರಿಶ್ರಮಗಳೇ ನಮ್ಮ ಸಾಧನೆಯ ದಾರಿಯನ್ನು ಸುಲಭಗೊಳಿಸುತ್ತದೆ. ಯೋಗಾಭ್ಯಾಸಕ್ಕೆ ಬೆಂಗಳೂರಿಗರ ಆಸಕ್ತಿ ಹೆಚ್ಚಿರುವುದು ಕಂಡು ಖುಷಿ ಎನಿಸುತ್ತಿದೆ’ ಎಂದು ಬಬಿತಾ ಹಾಗೂ ಗೀತಾ ಸಂತೋಷ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.