ADVERTISEMENT

ಲ್ಯಾಂಡ್‌ರೋವರ್‌ನಿಂದ ಆಫ್‌ರೋಡ್‌ ಡ್ರೈವ್!

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:50 IST
Last Updated 27 ಮೇ 2016, 19:50 IST
ಲ್ಯಾಂಡ್‌ರೋವರ್‌ನಿಂದ ಆಫ್‌ರೋಡ್‌ ಡ್ರೈವ್!
ಲ್ಯಾಂಡ್‌ರೋವರ್‌ನಿಂದ ಆಫ್‌ರೋಡ್‌ ಡ್ರೈವ್!   

ಕೊಚ್ಚಿಯಲ್ಲಿ ರೋಮಾಂಚನಕಾರಿ ಆಫ್‌ರೋಡ್ ಅಭಿಯಾನ ನಡೆಸಿ ಯಶಸ್ವಿಯಾದ ಲ್ಯಾಂಡ್‌ರೋವರ್‌ ಇದೀಗ ಬೆಂಗಳೂರಿನಲ್ಲಿ ಸಾಹನಯಾನ  ಮುಂದುವರಿಸಲು ಉದ್ದೇಶಿಸಿದೆ.

ಅಭಿಯಾನದಲ್ಲಿ ಪಾಲ್ಗೊಳ್ಳುವವರು ಸ್ಟೈಲಿಶ್ ಮತ್ತು ವಿಶಿಷ್ಟ ರೀತಿಯಲ್ಲಿ ಸಿದ್ಧಪಡಿಸಿರುವ ಲ್ಯಾಂಡ್‌ರೋವರ್ ವಾಹನಗಳ ಮೂಲಕ ಕಠಿಣವಾದ ಆಫ್ ರೋಡ್ ಡ್ರೈವ್‌ನಲ್ಲಿ ಹೊಸ ಅನುಭವ ಹೊಂದಲಿದ್ದಾರೆ.

ಬೆಂಗಳೂರಿನಲ್ಲಿ ಡಿಸ್ಕವರಿ ಸ್ಪೋರ್ಟ್ಸ್‌ ಮತ್ತು ರೇಂಜ್ ರೋವರ್ ಇವೋಕ್ ವಾಹನಗಳನ್ನು ಚಲಾಯಿಸುವ ಮೂಲಕ ಲ್ಯಾಂಡ್‌ರೋವರ್‌ ಸಾಮರ್ಥ್ಯವನ್ನು ಅರಿತುಕೊಳ್ಳಲಿದ್ದಾರೆ.

ಬೆಂಗಳೂರು ದಕ್ಷಿಣದ ಬನ್ನೇರುಘಟ್ಟದ ಬಳಿಯ ಶಾನುಭೋಗನಹಳ್ಳಿಯಲ್ಲಿರುವ ವೈಲ್ಡ್ ರಿಟ್ರೀಟ್ ಅಡ್ವೆಂಚರ್ ಕ್ಲಬ್‌ನಲ್ಲಿ ಮೇ 29ರವರೆಗೆ ಡ್ರೈವ್ ನಡೆಯಲಿದೆ.

ಲ್ಯಾಂಡ್‌ರೋವರ್ ಇಂತಹ ಅಭಿಯಾನವನ್ನು ಭಾರತದಲ್ಲಿ 2013ರಿಂದ ಆಯೋಜಿಸುತ್ತಾ ಬಂದಿದೆ. ಈ ಸಾಹಸಮಯ ಡ್ರೈವ್‌ನ ಅಭಿಯಾನಕ್ಕೆ ಕೊಚ್ಚಿಯಲ್ಲಿ ಚಾಲನೆ ನೀಡಲಾಗಿದ್ದು, ಅಲ್ಲಿ 130ಕ್ಕೂ ಹೆಚ್ಚು ಗ್ರಾಹಕರು ಲ್ಯಾಂಡ್‌ರೋವರ್‌ ವಾಹನಗಳನ್ನು ಚಲಾಯಿಸಿ ರೋಮಾಂಚನಗೊಂಡರು. ಇಂತಹ ಅನುಭವ ನೀಡಲು ಸಿದ್ಧವಾಗಿರುವ ಎರಡನೇ ನಗರ ಬೆಂಗಳೂರು.

ಭಾರತದಲ್ಲಿ ಲ್ಯಾಂಡ್ ರೋವರ್ ಲ್ಯಾಂಡ್ ರೋವರ್‌ನ ರೇಂಜ್ ರೋವರ್ ಬೆಲೆ ₹ 2.15 ಕೋಟಿಯಿಂದ ಆರಂಭ. ರೇಂಜ್ ರೋವರ್ ಸ್ಪೋರ್ಟ್ ₹1.20 ಕೋಟಿಯಿಂದ ಆರಂಭ. ಡಿಸ್ಕವರಿ ಸ್ಪೋರ್ಟ್‌ಗೆ ₹48.43 ಲಕ್ಷ ಆರಂಭಿಕ ಬೆಲೆ. ರೇಂಜ್ ರೋವರ್ ಇವೋಕ್ ಪ್ರಾರಂಭಿಕ ಬೆಲೆ ₹49.46 ಲಕ್ಷ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.